ಮಿಸ್ಟರ್ ರಾ ಕ್ಲಾಸಿಕ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪ್ರಥಮ

ಮುಂಡಗೋಡ 18: ಮುಂಡಗೋಡದ ಅಂಭೆಡ್ಕರ್ ಓಣಿಯ ಪ್ರತಿಭಾವಂತ ದೇಹದಾರ್ಢ್ಯ ಪಟು ಸಚಿನ ಪರಶುರಾಮ ಕೊರವರ ದಿ. 17ರಂದು ಬೆಳಗಾವಿಯ ಧರ್ಮವೀರ ಸಂಭಾಜಿ ಉದ್ಯಾನ ಇಲ್ಲಿ ಕರ್ನಾಟಕ ಬಾಡಿ ಬಿಲ್ಡರ್ಸ್‌ ಅಸೋಸಿಯೇಶನ್ ನ ವತಿಯಿಂದ ನಡೆದ ರಾಜ್ಯ ಮಟ್ಟದ ಮಿಸ್ಟರ್ ರಾ ಕ್ಲಾಸಿಕ್ ಬಾಡಿ ಬಿಲ್ಡಿಂಗ್ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು ಮುಂಡಗೋಡ ತಾಲೂಕಿಗೆ ಕೀರ್ತಿ ತಂದಿದ್ದಾರೆ . ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಮುಂಡಗೋಡ ಗುರು ಹಿರಿಯರು ಶುಭ ಹಾರೈಸಿದ್ದಾರೆ. ಪ್ರತಿಭಾವಂತ ಸಚಿನ ಪರಶುರಾಮ ಕೊರವರ ಛಲ ಬಿಡದೆ ಬಾಡಿ ಬಿಲ್ಡಿಂಗ್ ನಲ್ಲಿ ತನ್ನ ಛಾಪು ಮೂಡಿಸುತ್ತಿರುವ , ಈಗಿನ ಯುವಕರಿಗೆ ಮಾದರಿ ಆಗಿ ಗುಟ್ಕಾ, ಎಣ್ಣೆ,ಮೊಬೈಲ್ ದಾಸರಾಗಿ ಜೀವನದ ಅಮೂಲ್ಯ ಸಮಯವನ್ನು ಹಾಳು ಮಾಡುವ ಎಷ್ಟೋ ಜನಕ್ಕೆ ಸ್ಫೂರ್ತಿಯಾಗಲಿ. ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸೋಣ