ಬಿಜೆಪಿ ಸೇರ್ಪಡೆಭರಾಟೆ ಮಧ್ಯ ಸಿಲುಕಿದ ಅಗ್ನಿಶಾಮಕ ವಾಹನ
ಇಂಡಿ 08: ವಿಜಯಪುರ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಬಿಜೆಪಿ ಸೇರ್ಪಡೆ ಭರಾಟೆ ಜೋರಾಗಿದ್ದು. ಇಂಡಿಯಿಂದ ವಿಜಯಪುರಕ್ಕೆ ಬರುವ ನೇದಲಗಿ ಬೆಂಬಲಿಗರ ವಾಹನಗಳ ದಟ್ಟಣೆಯಿಂದಾಗಿ ಅಗ್ನಿಶಾಮಕ ವಾಹನ ಬರೋಬ್ಬರಿ 20 ನಿಮಿಷ ಮಾರ್ಗಮಧ್ಯದಲ್ಲೇ ನಿಲ್ಲಬೇಕಾಯಿತು.
ಶುಕ್ರವಾರದಂದು ವಿಜಯಪುರದ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ನೇತೃತ್ವದಲ್ಲಿ ಶಿವಯೋಗಪ್ಪ ನೇದಲಗಿ ಬಿಜೆಪಿ ಸೇರೆ್ಡಯಾಗಲಿದ್ದು ಅವರ ಬೆಂಬಲಿಗರು ಇಂಡಿಯಿಂದ ನೂರಾರು ಕ್ರೂಸರ್ಗಳಲ್ಲಿ ಸಾವಿರಾರು ಜನ ಆಗಮಿಸುತ್ತಿದ್ದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಾಲು ಸಾಲು ಕ್ರೂಸರ್ಗಳಿಂದಾಗಿ ದಟ್ಟಣೆ ಉಂಟಾಯಿತು. ಇದೇ ವೇಳೆ ಅಗ್ನಿಶಾಮಕ ವಾಹನವೊಂದು ಆಗಮಿಸಿದ್ದು. ಸಂಚಾರ ಸುಗಮಗೊಳಿಸುವುದು ದುಸ್ತರವಾಯಿತು. ಸುಮಾರು 20 ನಿಮಿಷ ಅಗ್ನಿಶಾಮಕ ವಾಹನ ಸೈರನ್ ಹಚ್ಚಿಕೊಂಡೆ ನಿಲ್ಲಬೇಕಾಯಿತು. ಇಂಡಿ ತಾಲೂಕಿನ ಪ್ರತಿ ಹಳ್ಳಿಯಿಂದ ಕ್ರೂಸರ್ಗಳು ವಿಜಪುರದತ್ತ ಹೊರಟಿದ್ದರಿಂದ ದಟ್ಟಣೆ ಹೆಚ್ಚಾಯಿತು. ಅಗ್ನಿಶಾಮಕ ವಾಹನಕ್ಕೆ ಸುಗಮ ಸಂಚಾರ ವ್ಯವಸ್ಥೆ ಸಿಗದೇ ಇರುವುದು ಒಂದು ಭಾಗವಾದರೆ ಶಿವಯೋಗೆಪ್ಪ ನೇದಲಗಿ ಬಿಜೆಪಿ ಸೇರೆ್ಡ ಅಬ್ಬರಕ್ಕೆ ಈ ದಟ್ಟಣೆ ಸಾಕ್ಷಿಯಾಗಿದ್ದು ಇನ್ನೊಂದು ಭಾಗ ಎಂದು ಸ್ಥಳೀಯರ ಅಭಿಪ್ರಾಯ.
ಇಷ್ಟೆಲ್ಲ ವಾಹನ ದಟ್ಟಣೆ ಉಂಟಾದರೂ ನಿಯಂತ್ರಿಸಬೇಕಾದ ಸ್ಥಳೀಯ ಪೊಲೀಸ್ರು ಯಾರೂ ಸ್ಥಳದಲ್ಲಿ ಇರದೇ ಇರುವ ಕಾರಣ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಯಿತು. ಪೊಲೀಸ್ರ ಕಾರ್ಯವೈಖರಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿರುವುದು ಸಹ ಕಂಡು ಬಂದಿತು.
ಶಿವಯೋಗೆಪ್ಪ ನೇದಲಗಿ ಅಭಿಮಾನಿಗಳು ಹಾಗೂ ಬೆಂಬಲಿಗರು ಹಲಗೆ, ಚಿಟ್ಟಹಲಗೆ, ಮಜಲು, ಕಹಳೆ ಮತ್ತಿತರ ವಾದ್ಯಗಳೊಂದಿಗೆ ಜೈಕಾರ ಹಾಕಿಕೊಂಡು ಪ್ರಯಾಣ ಬೆಳೆಸಿದ್ದು ಗಮನ ಸೆಳೆಯಿತು.