ಮುಂದಗೋಡ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಹಾನಿ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಹಾನಿ

ಮುಂಡಗೋಡ:ತಾಲೂಕಿನ ಇಂದೂರ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಹಾನಿಯಾದ ಘಟನೆ ಶುಕ್ರವಾರ ನಡೆದಿದೆ. 

ಬಸವರಾಜ ಹಡಪದ(ಮುದುಕಪ್ಪ ಐಗರ) ಎಂಬುವರ ಹುಲ್ಲಿನ ಬಣವೆಗೆ ಬೆಂಕಿ ತಗುಲಿದ್ದು ಇವರು ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿರುವ ತಮ್ಮ ಮನೆಯ ಹಿತ್ತಲಲ್ಲಿ ಹಾಕಿದ್ದ ಸುಮಾರು 1 ಟ್ರ್ಯಾಕ್ಟರ್‌ನಷ್ಟು ಹುಲ್ಲಿನ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ತಕ್ಷಣ ಗ್ರಾಮಸ್ಥರು ಬಂದು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಅರ್ಧದಷ್ಟು ಹುಲ್ಲಿನ ಬಣವೆ ಸುಟ್ಟು ಹಾನಿಯಾಗಿದೆ. ಉಳಿದ ಹುಲ್ಲು ಕೂಡ ಸುಟ್ಟ ಹೊಗೆ ಮತ್ತು ವಾಸನೆ ಬಡಿದು ತಮ್ಮ ದನಕರುಗಳಿಗೆ ತಿನ್ನಲು ಹುಲ್ಲು ಇಲ್ಲವಾಯಿತು ಎಂದು ಬಸವರಾಜ ಮತ್ತು ಆತನ ಕುಟುಂಬದವರು ನೊಂದುಕೊಂಡ ದೃಶ್ಯ ನೋಡಿ ಗ್ರಾಮಸ್ಥರು ಮರುಗಿದರು. 


ಸುದ್ದಿ ಓದಿ