ವಿದ್ಯುತ್ ತಂತಿ ಸ್ಪರ್ಷಿಸಿ ಕಬ್ಬಿನ ಗದ್ದೆಗೆ ಬೆಂಕಿ
ಮುಂಡಗೋಡ 02: ವಿದ್ಯುತ್ ತಂತಿ ಸ್ಪರ್ಶದಿಂದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಘಟನೆ ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮೈನಳ್ಳಿ ಸರ್ವೇ ನಂ22 ಪ್ಲಾ ನಂ 194ರಲ್ಲಿ ಬೆಳೆದ ಆನಂದ ರಘು ಇಂಗೋಲೆ ಎಂಬುವರಿಗೆ ಸೇರಿದ 3.5 ಎಕರೆ ಪ್ರದೇಶದ ಕಬ್ಬಿನ ಗದ್ದೆಗೆ ಬೆಂಕಿ ತಗಿಲಿದ್ದು, ಸುಮಾರು 2 ಎಕರೆ ಪ್ರದೇಶದ ಕಬ್ಬು ಹಾಗೂ 35 ರಬ್ಬರ್ ಪೈಪ್ಗಳು ಸಂಪೂರ್ಣ ಸುಟ್ಟು ಹೋಗಿದ್ದು, 1 ಲಕ್ಷಕ್ಕೂ ಅಧಿಕ ಹಾನಿಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಮುಂಡಗೋಡ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಆಗಬಹುದಾದ ಮತ್ತಷ್ಟು ಹಾನಿ ತಪ್ಪಿಸಿದ್ದಾರೆ. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ನಾರಾಯಣ ತಳೇಕರ, ಸಪ್ನಿಲ್ ಪೆಡ್ನೇಕರ, ಅಡಿವೆಪ್ಪ ಕುರುವಿನಕೊಪ್ಪ, ಬಸವರಾಜ ನಾಣಾಪುರ, ಮಂಜುನಾಥ ಪಟಗಾರ, ಸಂತೋಷ ಪಾಟೀಲ, ದುರ್ಗಪ್ಪ ಹರಿಜನ ಹಾಗೂ ಪರಶುರಾಮ ಮಟ್ಟಿಮನಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.