ಮುಂದಗೋಡ

ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ,

ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ,

ಮುಂಡಗೋಡ 28 : ಪಟ್ಟಣದಲ್ಲಿ ವಾಹನ ನಿಲುಗಡೆ ನಿಯಮಗಳನ್ನು ಉಲ್ಲಂಘಿಸಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಮುಂಡಗೋಡ ಪೊಲೀಸರು ಹಾಗೂ ಶಿರಸಿಯ ಟ್ರಾಫಿಕ್ ಪೊಲೀಸರು ಮಂಗಳವಾರ ಬಿಸಿ ಮುಟ್ಟಿಸಿದರು. ಪಟ್ಟಣದಲ್ಲಿ ಮುಂಡಗೋಡ ಪೊಲೀಸರು ಹಾಗೂ ಶಿರಸಿಯ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆ ಪರವಾನಗಿ ಇನ್ಸೂರೆನ್ಸ್‌ ಸೈಡ್ ಮಿರರ್ ಇಲ್ಲದೆ ವಾಹನ ಚಾಲನೆ ಸೇರಿದಂತೆ ವಿವಿಧ ಕಾಯ್ದೆಯಡಿಯಲ್ಲಿ ಸುಮಾರು 20 ಜನರಿಗೆ ದಂಡ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 


ಸುದ್ದಿ ಓದಿ