ಮಾಸ್ಕ ಧರಿಸದ ಅಂಗಡಿ ಮಾಲೀಕರಿಗೆ ಪುರಸಭೆಯಿಂದ ದಂಡ
ಹಗರಿಬೊಮ್ಮನಹಳ್ಳಿ 06: ಪ್ರತಿಯೊಬ್ಬರೂ ಮಾಸ್ಕ್ ಉಪಯೋಗಿಸುವಂತೆ ರಾಜ್ಯ ಸರಕಾರದನ ಮಾರ್ಗಸೂಚಿಗಳನ್ನು ಅನುಸರಿಸದ ಅಂಗಡಿ ಮಾಲೀಕರಿಗೆ ಮಂಗಳವಾರ ಪುರಸಭೆ ಸಿಬ್ಬಂದಿಯು ದಂಡ ವಿಧಿಸುವ ಕಾರ್ಯ ಕೈಗೆತ್ತಿಗೊಂಡಿದೆ.
ಮಾಹಾಮಾರಿ ಕೊರೊನಾ ದಿನೇ ದಿನೆ ತನ್ನ ಕದಂಬ ಬಾಹುಗಳನ್ನು ಚಾಚುತ್ತಿರುವುದುನ್ನು ಕಂಡು ರಾಜ್ಯ ಸರಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಿಳಿ ಹೇಳಿದೆ, ಜನ ಜಂಗುಳಿ ಪ್ರದೇಶಗಳಲ್ಲಿ ಕಡ್ಡಾಯ ಮಾಸ್ಕ್, ದೈಹಿಕ ಅಂತರ, ಸೈನಿಟೈಸರ್ ಬಳಕೆ ಮಾಡುವಂತೆ ಆದೇಶವಿದ್ದರೂ ಕೆಲ ಅಂಗಡಿ ಮಾಲೀಕರು ಮಾರ್ಗಸೂಚಿಗಳನ್ನು ಅನುಸರಿಸದ ಕಾರಣ ದಂಡ ವಿಧಿಸುತ್ತಿರುವುದು ಕಂಡು ಬಂದಿತು.
ಪಟ್ಟಣದ ಫೋಕಸ್ ಮಾರ್ಟ್, ಜೈನ್ ಕಾಲೋನಿ, ಒಂ ಶಾಂತಿ ಲೈನ್ ಹಿಂಭಾಗಗಳಲ್ಲಿ ಮಾಸ್ಕ್ ಧರಿಸದ ಅಂಗಡಿ ಮಾಲೀಕರಿಂದ ದಂಡ ವಸೂಲಿ ಮಾಡಲಾಗಿದೆ. ಕೋವಿಡ್ ವೈರಸ್ನ ಹರಡುವಿಕೆಯ ನಿಯಂತ್ರಣಕ್ಕೆ ರಾಜ್ಯ ಸರಕಾರವು ಕಟ್ಟು ನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ, ಪುರಸಭೆ ಕಸ ವಲೇವಾರಿ ವಾಹನಗಳಿಂದ ಜನರಿಗೆ ಅರಿವು ಮೂಡಿಸುವ ಕಾರ್ಯವು ನಡೆಯುತ್ತಿದೆ ಆದರೆ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಮಾಸ್ಕ್ ಹಾಕದ ಕಾರಣ ದಂಡ ವಿಧಿಸಲಾಗಿದೆ ಕಿರಿಯ ಆರೋಗ್ಯ ನೀರಿಕ್ಷಕಿ ಕೆ.ಎಲ್.ನಾಗರತ್ನ ಹಾಗೂ ಜಯಲಕ್ಷೀ ತಿಳಿಸಿದರು.
ಈ ಸಂಧರ್ಭದಲ್ಲಿ ಪುರಸಭೆ ಸಿಬ್ಬಂದಿಗಳಾದ ಗುಡದಯ್ಯ, ಮಾರುತಿ, ಹನುಮಂತಪ್ಪ, ಈರಣ್ಣ, ಚಂದ್ರು, ರಾಜಾಸಾಬ್, ಪ್ರಭಾಕರ್ ಇದ್ದರು.