ಸಿಡಿಲಿಗೆ ಬಲಿಯಾದ ಮಹಿಳೆ ಕುಟುಂಬಕ್ಕೆ ಧನ ಸಹಾಯ ಸಾಂತ್ವನ
ತಾಳಿಕೋಟಿ 08: ದೇ.ಹಿಪ್ಪರಗಿ ಮತಕ್ಷೇತ್ರದ ಹುಣಶ್ಯಾಳ ಗ್ರಾಮದಲ್ಲಿ ಇತ್ತೀಚಿಗೆ ಸಿಡಿಲು ಬಡಿದು ಮೃತಳಾದ ಜೈನಬ್ಬಿ ಸಿಪಾಯಿ ಮನೆಗೆ ಭೇಟಿ ನೀಡಿದ ಕಾಂಗ್ರೇಸ ಮುಖಂಡ ಯುವ ಉದ್ಯಮಿ ಆನಂದಗೌಡ ದೊಡಮನಿ ಅವರು ವೈಯಕ್ತಿಕವಾಗಿ ಧನ ಸಹಾಯ ನೀಡಿ ಕುಟುಂಕ್ಕೆ ಸಾಂತ್ವನ ನೀಡಿದರು.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಸಿಡಿಲಿನಿಂದಾಗಿ ಈ ಭಾಗದಲ್ಲಿ ಸಾಕಷ್ಟು ಹಾನಿಯಾಗಿದ್ದು ಇತ್ತೀಚಿಗೆ ಹುಣಶ್ಯಾಳ ಗ್ರಾಮದ ತೋಟದಲ್ಲಿ ಕೆಲಸ ಮಾಡಲು ಹೊದ ಜೈನಬ್ಬಿ ಸಿಪಾಯಿ ಎಂಬ ಬಡ ಮಹಿಳೆ ಸಿಡಿಲಿಗೆ ಬಲಿಯಾಗಿದ್ದಳು. ನಿನ್ನೆ ಕಾಂಗ್ರೇಸ್ ಮುಖಂಡ ಆನಂದಗೌಡ ದೊಡಮನಿ ಅವರು ಮೃತ ಮಹಿಳೆಯ ಮನೆಗೆ ತೆರಳಿ ತಮ್ಮ ವತಿಯಿಂದ ಧನ ಸಹಾಯ ಮಾಡಿ ಕುಟುಂದ ಸದಸ್ಯರಿಗೆ ಧೈರ್ಯ ನೀಡಿ ಸಾಂತ್ವನ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಗಣ್ಯರಾದ ಎ.ಎ.ಮೋಮಿನ, ಎಚ್. ನಾಗಾವಿ, ಬಿ.ಎ. ಸಿಪಾಯಿ, ಅನ್ವರ ಸಿಪಾಯಿ, ಎಸ್.ಬಿ ಬಂಗಾರಗುಂಡ, ಮೈನುದ್ದೀನ ಬಾಗವಾನ, ಮುಸ್ತಫಾ ತಾಳಿಕೋಟಿ, ಶಕೀಲ್ ಪೊಲಾಸಿ, ತೌಫೀಕ್ ಸಿಪಾಯಿ, ಚೆತನ ಹೊಟಗಾರ, ರಫೀಕ ನೀರಲಗಿ, ಸದ್ಧಾಮ ಬಿಂಜಲಭಾವಿ, ಶಬ್ಬೀರ ಸಿಪಾಯಿ, ಹುಸೇನ ಆಲಮೇಲ, ಮುಖಂಡರಾದ ರವಿಕುಮಾರ ಹಯ್ಯಳ, ಆನಂದ ಮದರಕಲ್ಲ(ವಕೀಲರು), ಸಂತೋಷ ದೊಡಮನಿ, ಮತ್ತೀತರರು ಉಪಸ್ಥಿತರಿದ್ದರು.