ಶಿಗ್ಗಾವ್

ಯಶಸ್ಸು ಸಾಧಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ಯಶಸ್ಸು ಸಾಧಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ
ಶಿಗ್ಗಾವಿ : ಯಶಸ್ಸು ಸಾಧಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಇಂತಹ ವಿದ್ಯಾರ್ಥಿಗಳು ನಮ್ಮ ಶಾಲೆಗೆ ಮುಕುಟಪ್ರಾಯ ಮತ್ತು ಆದರ್ಶಪ್ರಾಯ ಎಂದು ದತ್ತಣ್ಣ ವೆರ್ಣೇಕರ್ ಹೇಳಿದರು. 
ಪಟ್ಟಣದ ಎಸ್ ಬಿ ಬಿ ಮಾಮಲೆ ದೇಸಾಯಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ನಮ್ಮ ಮಹಾವಿಧ್ಯಾಲಯದ ವಿಧ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು. 
ಪ್ರಾಚಾರ್ಯ ರಮಾಕಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಯಶಸ್ಸು ಸಾಧಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದು ತುಂಬಾ ಹೆಮ್ಮೆಯ ಮತ್ತು ಸಂತೋಷದ ವಿಷಯ ಎಂದು ತಿಳಿಸಿ, ಈ ವರ್ಷ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಇಂತಹ ಸಾಧನೆ ಮಾಡಿ ತಂದೆ-ತಾಯಿಗೆ ಗುರುಹಿರಿಯರಿಗೆ ಕಾಲೇಜಿಗೆ ಕೀರ್ತಿ ತರಬೇಕೆಂದು ಹಾರೈಸಿದರು. 
ವಾಣಿಜ್ಯದಲ್ಲಿ ಶ್ವೇತಾ ದಂಡಿನ್, ಅಕ್ಕಮ್ಮ ದೊಡ್ಡಮನಿ, ಸುದೀಪ್ ಆಡಿನ ಪವಿತ್ರ ಬೆನಕಣ್ಣನವರ ಮತ್ತು ಕಲಾದಲ್ಲಿ ಸಬೀನಾ ಬಾನು ಮಮ್ಮದಸಾಬನವರ, ಜಗದೀಶ ಗೌಡ ಪಾಟೀಲ್, ಸುನಂದಾ ಭಂಗಿ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದಿದ್ದಾರೆ. 
ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯ ಕೆ.ಬಿ ಚನ್ನಪ್ಪ, ಎಸ್ ಬಿ ಹರ್ಲಾಪುರ್, ನಾಗರಾಜ್ ಡುಮ್ಮನವರ್, ಮಂಜುನಾಥ ಎಲಿಗಾರ್, ಮಂಜುನಾಥ್ ಮಡಿವಾಳರ್ ಉಪಸ್ಥಿತರಿದ್ದರು. ಸಾವಿತ್ರಿ ಪೂಜಾರ್ ಕಾರ್ಯಕ್ರಮ ನಿರೂಪಿಸಿದರು, ಎಸ್ ಪಿ ಬಳ್ಳಾರಿ ಸ್ವಾಗತಿಸಿದರು, ಪ್ರದೀಪ್ ಮೂಡೇರ ವಂದಿಸಿದರು. 

ಸುದ್ದಿ ಓದಿ