ವಿಜಯಪುರ

ನೂತನ ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ಸನ್ಮಾನ

ನೂತನ ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ಸನ್ಮಾನ

ದೇವರಹಿಪ್ಪರಗಿ 27: ಪಟ್ಟಣದ ಶಾಸಕರ ಮಾದರಿ ಶಾಲೆಗೆ ನೂತನವಾಗಿ ಆಯ್ಕೆಯಾದ ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಶುಕ್ರವಾರದಂದು ಆಯೋಜನೆ ಮಾಡಲಾಗಿತ್ತು. 

ನೂತನ ಅಧ್ಯಕ್ಷ ಸಂಪತ್ ಜಮಾದಾರ ಉಪಾಧ್ಯಕ್ಷ ಮಲ್ಲು ಮೇಲಿನಮನಿ, ಸರ್ವ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರನ್ನು ಶಾಲೆಯ ಮುಖ್ಯ ಗುರುಗಳಾದ ಪಿ.ಸಿ.ತಳಕೇರಿ ಹಾಗೂ ಮುಖಂಡರು ವಿಶೇಷವಾಗಿ ಸನ್ಮಾನಿಸಿದರು. ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಗುಡಿಮನಿ, ಮುಖಂಡರುಗಳಾದ ಪ್ರಕಾಶ ತಳಕೇರಿ, ಶಿವು ತಳವಾರ ಸೇರಿದಂತೆ ಶಾಲೆಯ ಶಿಕ್ಷಕರು ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ