ಬಳ್ಳಾರಿ

ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರುಗಳಿಗೆ ಸನ್ಮಾನ

ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರುಗಳಿಗೆ ಸನ್ಮಾನ

ಬಳ್ಳಾರಿ 28: ಬಳ್ಳಾರಿ ಕಲ್ಚರಲ್ ಅಕ್ಟಿವಿಟೀಸ್ ಅಸೋಸಿಯೇಷನ್ ವತಿಯಿಂದ ದಿ. 27ರಂದು ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಹಿರಿಯ ಕಲಾವಿದರಿಗೆ ಅವರವರ ಸ್ವಗೃಹಕ್ಕೆ ಭೇಟಿ ನೀಡಿ ಸನ್ಮಾನಿಸಿದ ಗಣ್ಯರುಗಳು ಕೆ.ಜಗನ್ಮೋಹನರಾವ್ ಸರ್ಕಾರಿ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಹಿರಿಯ ಕಲಾವಿದರು, ಮಂಜುನಾಥ ರವರಿಗೆ ಸಾಧನೆಯ ಕ್ಷೇತ್ರ ಪತ್ರಿಕೋದ್ಯಮ, ಸಾಂಸ್ಕೃತಿಕ (ರಂಗ) ಸಂಘಟನೆ ಮುಖಾಂತರ ಮಾಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. 

ದಿ. 14ನೇ ಸಾಲಿನ ಉಗಾದಿ ಪುರಸ್ಕಾರಗಳು ಮತ್ತು ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಕಲಾಕಾರರ ಗಣ್ಯರುಗಳು ಕಾರ್ಯಕ್ರಮಕ್ಕೆ ಬಂದಿಲ್ಲದ ಕಾರಣ ಕಲಾವಿದರ ಸ್ವಗೃಹಕ್ಕೆ ಭೇಟಿ ಸನ್ಮಾನಿರು ಬೆಳಗಲ್ಲು ವೀರಣ್ಣ, ನಾಡೋಜ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಕಲಾವಿದರು, ಯಲ್ಲನಗೌಡ, ಹಿರಿಯ ಜಾನಪದ ಕಲಾವಿದರು, ಬಿ.ಕರುಣ, ಕರ್ನಾಟಕ ಸಂಗೀತ ಕಲಾಕಾರರು ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಕು. ತನ್ಯಾ ಶ್ರೀನಿವಾಸರಾವ್ (ವಿಜ್ಞಾನ), ಚೈತನ್ಯ ಬಾಲಕಿಯರ ಪದವಿಪೂರ್ವ ಕಾಲೇಜ್, ಬಳ್ಳಾರಿ, ಕುಮಾರಿ ಗಣಾಚಾರಿ ಶಾಲಿನಿ ವಾಣಿಜ್ಯ ವಿಭಾಗದಲ್ಲಿ, ನ್ಯೂ ಚೈತನ್ಯ ಪದವಿಪೂರ್ವ ಮೊದಲಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶೀಲಾ ಬ್ರಹ್ಮಯ್ಯ, ಕಲಾವಿದರು ಸ್ವಗೃಹಕ್ಕೆ ಭೇಟಿ ನೀಡಿ ಸನ್ಮಾನಿಸಲಾಯಿತು.

ಸುದ್ದಿ ಓದಿ