ಎಂ.ಎಸ್.ಕರಿಗೌಡರಗೆ ಸನ್ಮಾನ
ಮುಂಡರಗಿ 31: ರಾಜ್ಯ ನಾಯಕರು ಆರ್ಶಿವಾದ ಮಾಡಿ ಈ ಹುದ್ದೆಯನ್ನು ನನ್ನ ಹೆಗಲಿಗೆ ಏರಿಸಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರ ಧ್ವನಿಯಾಗಿ ಅಭಿವೃದ್ಧಿಪರ ಕೆಲಸ ಮಾಡುತ್ತೇನೆ. ಅಲ್ಲದೇ ಪತ್ರಿಕೆಗಳಿಗೆ ಜಾಹೀರಾತು ನೀಡುವಂತ ಪ್ರಾಮಾಣಿಕ ಕೆಲಸ ಮಾಡಬೇಕಾಗುತ್ತದೆ ಎಂದು ಮಾರ್ಕೆಟಿಂಗ್ ಕಮ್ಯುನೀಕೇಷನ್ ನಿಗಮದ ನೂತನ ಅಧ್ಯಕ್ಷ ಎಂ.ಎಸ್.ಕರಿಗೌಡರ ಹೇಳಿದರು.
ಪಟ್ಟಣದ ನೀರಿಕ್ಷಣ ಮಂದಿರದಲ್ಲಿ ಮುಂಡರಗಿ ಬಿಜೆಪಿ ಮಂಡಲ ಮತ್ತು ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದಲೂ ಪಂಡಿತ ದೀನದಯಾಳು ಮತ್ತು ಶ್ಯಾಮಪ್ರಸಾದ ಮುಖರ್ಜಿ, ಜಗನ್ನಾಥ ಜೋಶಿಯವರ ಮೂಲಕ ಜನಸಂಘದ ಸೇರೆ್ಡಯಿಂದ ರಾಜಕಿಯ ಜೀವನ ಪ್ರಾರಂಭಿಸಿ, ಇಲ್ಲಿಯವರೆಗೂ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಬಿಜೆಪಿಯಲ್ಲಿ ಸೇವೆಯನ್ನು ಮಾಡಿದ್ದೇನೆ. ಜಾಹಿರಾತು ನೀಡುವ 22 ಇಲಾಖೆ ಮತ್ತು ನಿಗಮಗಳು ಮಾರ್ಕೆಟಿಂಗ್ ಕಮ್ಯುನೀಕೇಷನ್ ನಿಗಮದ ಅಡಿಯಲ್ಲಿ ಬರುತ್ತವೆ. ಈ ನಿಗಮದ ಮೂಲಕ ನೂರಾರು ಪತ್ರಿಕೆಗಳಿಗೆ ಜಾಹಿರಾತು ನೀಡುವ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಂಡರಗಿ ಮಂಡಲದ ಬಿಜೆಪಿ ಅಧ್ಯಕ್ಷ ಹೇಮಗೀರೀಶ ಹಾವಿನಾಳ, ಮುಖಂಡರಾದ ಕರಬಸಪ್ಪ ಹಂಚಿನಾಳ, ಡಾ.ಭೀಮಸಿಂಗ್ ರಾಠೋಡ್, ಶಿವನಗೌಡ ಗೌಡ್ರ, ಎಸ್.ವಿ.ಪಾಟೀಲ, ಡಾ.ಕುಮಾರಸ್ವಾಮಿ ಹಿರೇಮಠ, ರಜನೀಕಾಂತ ದೇಸಾಯಿ, ನಾಗೇಶ ಹುಬ್ಬಳ್ಳಿ, ದೇವಪ್ಪ ಇಟಗಿ, ನಾಗರಾಜ ಕಾಟ್ರಳ್ಳಿ, ಪವನ ಮೇಟಿ, ರಮೇಶ ಹುಳಕಣ್ಣವರ, ಮುದ್ಲಿಂಗಪ್ಪ ಕೋರ್ಲಹಳ್ಳಿ, ಯಶವಂತ ಚವ್ಹಾಣ, ಸುಭಾಸ ಗುಡಿಮನಿ, ನಾಗರಾಜ ಮುರುಡಿ, ಎಸ್.ಎಂ.ಪಾಟೀಲ, ಶಂಕರ ಉಳ್ಳಾಗಡ್ಡಿ, ಮುತ್ತು ಅಳವಂಡಿ, ಮಂಜುನಾಥ ಮಧೋಳ, ಮಂಜುನಾಥ ಹಟ್ಟಿ, ಪಾಲಾಕ್ಷಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.