ಬಳ್ಳಾರಿ

ಲೋಕಾಯುಕ್ತ ಎಸ್ಪಿ ಮಂಜುನಾಥ್ ಬಾಬುಗೆ ಸನ್ಮಾನ

ಲೋಕಾಯುಕ್ತ ಎಸ್ಪಿ ಮಂಜುನಾಥ್ ಬಾಬುಗೆ ಸನ್ಮಾನ

ಬಳ್ಳಾರಿ 20: ಬಳ್ಳಾರಿ ಜಿಲ್ಲೆಗೆ ನೂತನವಾಗಿ ಆಗಮಿಸಿ ಅಧಿಕಾರ ಸ್ವೀಕರಿಸಿದ ಲೋಕಾಯುಕ್ತ ಎಸ್ಪಿ ಹೆಚ್‌.ಮಂಜುನಾಥ್ ಬಾಬು ಅವರನ್ನು ಬಳ್ಳಾರಿ ವಾಯ್ಸ್‌ ಹಾಸ್ಪಿಟಲ್ ಚೈರ್ಮನ್, ಬೆಂಗಳೂರು ಹೈಕೋರ್ಟ್‌ ಅಡ್ವಕೇಟ್, ಸಮಾಜ ಸೇವಕರು ಆದಂತ ದಾಸರಿ ಗೋವಿಂದ ಅವರು ಲೋಕಾಯುಕ್ತ ಕಛೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದ ಲೋಕಾಯುಕ್ತ ಎಸ್ಪಿ ಮಂಜುನಾಥ್ ಬಾಬು ಅವರನ್ನು ವೈಯಕ್ತಿಕವಾಗಿ ಹಾಗೂ ಬಳ್ಳಾರಿಯ ನಾಗರೀಕರ ಪರವಾಗಿ ಸ್ವಾಗತಿಸಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಬೆಂಗಳೂರಿನಲ್ಲಿ ಎಸಿಪಿಯಾಗಿ ಕಾರ್ಯ ನಿರ್ವಹಿಸುತಿದ್ದು, ಮುಂಬಡ್ತಿಯ ಮೇಲೇ  ಮೊಟ್ಟ ಮೊದಲನೇ ಬಾರಿ ಲೋಕಾಯುಕ್ತ ಎಸ್ಪಿಯಾಗಿ ಬಳ್ಳಾರಿಯಲ್ಲಿ ಅಧಿಕಾರ ಸ್ವೀಕರಿಸಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದರು. ಇವರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ವಿಷಯದಲ್ಲಿ ನಾನು ಪೂರ್ತಿ ಸಹಕಾರವನ್ನು ನೀಡುತ್ತೇನೆ ಎಂದು ತಿಳಿಸಿದರು. ಈಸಂಧರ್ಬದಲ್ಲಿ ಕಚೇರಿಯ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ