ಹನುಮಕ್ಕಾ ವಡ್ಡರಗೆ ಸನ್ಮಾನ
ಮುಂಡಗೋಡ: ಹಿರಿಯ ಮತದಾರರಾದ ತಾಲೂಕಿನ ಮಳಗಿ ಗ್ರಾಮದ ಹನುಮಕ್ಕಾ ವಡ್ಡರ(100) ದೇಶದ ಚುನಾವಣಾ ಮತದಾನದ ಪ್ರಕ್ರಿಯೆಯಲ್ಲಿ ನಿರಂತರವಾಗಿ ಭಾಗವಹಿಸಿ ಪ್ರಜಾಸತ್ತಾತ್ಮಕ ಕರ್ತವ್ಯ ಪೂರೈಸಿದ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಶನಿವಾರ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ತಹಶೀಲ್ದಾರ ಶಂಕರ ಗೌಡಿ, ಶಿರಸ್ತೇದಾರ ಅಶೋಕ ಹೆಬ್ಬಳ್ಳಿ, ಚುನಾವಣಾ ಸಿಬ್ಬಂದಿ ರಾಘವೇಂದ್ರ ಗಿರಡ್ಡಿ, ನವೀನ ಕುಲಕರ್ಣಿ, ಗ್ರಾಮ ಲೆಕ್ಕಾಧಿಕಾರಿ ಹನುಮಂತ ಕಡಕೋಳ ಉಪಸ್ಥಿತರಿದ್ದರು.