ಸುರೇಶ ಕೋಟಗಿ ಮತ್ತು ಮಹಾದೇವ ಚವ್ಹಾಣಗೆ ಸನ್ಮಾನ
ಶಿಗ್ಗಾವಿ 18: ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾಗಿ ವರ್ಗಾವಣೆಗೊಂಡಂತ ಸುರೇಶ ಕೋಟಗಿ ಮತ್ತು ಪ್ರಭಾರ ಕಲ್ಯಾಣ ಅಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಂತ ಮಹಾದೇವ ಚವ್ಹಾಣ ಇರ್ವರಿಗೂ ತಾಲೂಕ ನೌಕರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಸತಿ ನಿಲಯದ ಮೇಲ್ವಿಚಾರಕರಾದ ರಮೇಶ ಹರಿಜನ, ದುಂಡಶಿ ಬಾಲಕರ ನಿಲಯ ಮೇಲ್ವಿಚಾರಕ ಪ್ರವೀಣ ಹೊಸಮನಿ, ಬಂಕಾಪೂರ ವಸತಿ ನಿಲಯ ಮೇಲ್ವಿಚಾರಕ ಸಂಗಪ್ಪ ಗುದಗಿ, ಶಿಸುವಿನಾಳ ವಿಧ್ಯಾರ್ಥಿ ವಸತಿ ನಿಲಯ ಮೇಲ್ವಿಚಾರಕ ಬಾಬು ಖವಾಸ, ಬಾಲಕಿಯರ ವಸತಿ ನಿಲಯ ಮೇಲ್ವಿಚಾರಕಿ ಸಾವಕ್ಕ ಜಡಿ ಸೇರಿದಂತೆ ಇತರರು ಇದ್ದರು. ನೌಕರ ಸಂಘದ ಕಾರ್ಯದರ್ಶಿ ರಮೇಶ ಹರಿಜನ ಕಾರ್ಯಕ್ರಮ ನಿರ್ವಹಿಸಿದರು.