ಕಸ ಗೂಡಿಸುವ ಮಹಿಳೆಯರ ಪಾದಪೂಜೆ
ಮಾಂಜರಿ 10: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅಂಕಲಿ ಗ್ರಾಮ ಪಂಚಾಯಿತಿ ಸದಸ್ಯ ತುಕಾರಾಮ ಪಾಟೀಲ ಅವರು ಕಸ ಗೂಡಿಸುವ ಮಹಿಳೆಯರ ಪಾದಪೂಜೆ ಮಾಡಿದರು. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಪಾದಪೂಜೆ ಮಾಡಲಾಯಿತು
ಗ್ರಾಮ ಪಂಚಾಯಿತಿಯ ಸುಮಾರು 10 ಜನ ಕಸಗೂಡಿಸುವ ಮಹಿಳೆಯರ ಪಾದಪೂಜೆ ಮಾಡುವುದರ ಜೊತೆಗೆ ಶಾಲು ಹೊದಿಸಿ, ಶ್ರೀಫಲ ನೀಡಿ ಸತ್ಕರಿಸಿದರು.
ನಂತರ ಅಥಿತಿಗಳಾಗಿ ಬಿ ಕೆ ಆರತಿ ಮಾತನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶಗಳ ಹೆಣ್ಣುಮಕ್ಕಳು ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅತೀವ ಸಂತೋಷವಾಗುತ್ತಿದೆ. ಕಸಗೂಡಿಸುವ ಮಹಿಳೆಯರ ಪಾದಪೂಜೆ ಮಾಡುವ ವಿಶೇಷ ಗ್ರಾಮ ಪಂಚಾಯಿತಿ ಸದಸ್ಯರು ನಮ್ಮಲ್ಲಿ ಇರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ತುಕಾರಾಮ ಪಾಟೀಲ ಅವರು ಮಾತನಾಡಿ ಕಾರ್ಯಕ್ರಮ ನನ್ನ ಸ್ವಂತದಿಂದ ಮಾಡುತ್ತಿದ್ದೇನೆ. ಈ ಕಾರ್ಯಕ್ರಮದಿಂದ ಮಹಿಳೆಯರೂ ನಾವು ಯಾವುದರಲ್ಲಿ ಕಡಿಮೆ ಇಲ್ಲ ಎಂಬ ಭಾವನೆ ಮೂಡಬೇಕು. ಅಲ್ದೆ ಇಂದು ಮಹಿಳೆಯರು ಸಾವಲಂಬಿ ಜೀವನ ನಡೆಸಬೇಕು. ಸ್ವಂತ ಉದ್ಯೋಗದಿಂದ ಆರ್ಥಿಕವಾಗಿ ಸಬಲರಾಗಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶೈಲಜಾ ಪಾಟೀಲ, ಸದಸ್ಯರಾದ ಶೀಲಾ ಹಲವಾಯಿ, ದೀಪಕ ಮೇದಾರ, ಉಮೇಶ ವಡ್ಡರ, ಅಲ್ಲಾಭಕ್ಷ ಪಟವೇದಾರ, ಸುರೇಶ ಪಾಟೀಲ, ಪಿಡಿಓ ಅಸೋದೆ, ಅನೀಲ ಕಮತೆ, ಸಂಜು ಕಮತೆ, ಬಾಬು ಕಮತೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.