ಬಳ್ಳಾರಿ

ವಿದ್ಯಾರ್ಥಿಗಳಿಗೆ ಸನ್ಮಾನ- ಪ್ರತಿಭಾ ಪುರಸ್ಕಾರ ವಿತರಣೆ

ವಿದ್ಯಾರ್ಥಿಗಳಿಗೆ ಸನ್ಮಾನ- ಪ್ರತಿಭಾ ಪುರಸ್ಕಾರ ವಿತರಣೆ
ಬಳ್ಳಾರಿ:ಅ 9: ರಂದು  ನಗರದ ಬಸವ ಭವನದಲ್ಲಿ ಅಖಿಲ ಕರ್ನಾಟಕ ಲಿಂಗಾಯತ ಲಾಳಗೊಂಡರ ಸಂಘ (ರಿ) ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರಿನ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಮೂಲಕ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ  ಬಿ.ನಾಗೇಂದ್ರ ಅವರು ಭಾಗವಹಿಸಿ, ಮಾತನಾಡಿ, ಉತ್ತಮ ಶಿಕ್ಷಣದ ಮಹತ್ವ ಮತ್ತು ಸಮುದಾಯದ ಅಭಿವೃದ್ಧಿಯಲ್ಲಿ ಶಿಕ್ಷಣವು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಸಂಡೂರು ಪ್ರಭುಸ್ವಾಮಿ ಅವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಬಳ್ಳಾರಿ ನಗರದ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಗ್ರಾಮೀಣ ಶಾಸಕರಾದ ಬಿ ನಾಗೇಂದ್ರ ರವರು,ವಿ.ವಿ ಸಂಘದ ಅಧ್ಯಕ್ಷರಾದ ಗುರುಸಿದ್ದಯ್ಯ ಸ್ವಾಮಿ, ಲಾಳಗೊಂಡರ ಅಧ್ಯಕ್ಷರಾದ ಅರವಿ ಬಸವನಗೌಡ, ಜಿಲ್ಲಾ ಕಾರ್ಯಾಧ್ಯಕ್ಷರಾದ ಮೀನಳ್ಳಿ ಚಂದ್ರಶೇಖರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅಲ್ಲಂ ಪ್ರಶಾಂತ್, ಸಂಘದ ಸದಸ್ಯರಾದ ಯಾಳ್ಪಿ ಪಂಪನಗೌಡ, ಅಸುಂಡಿ ನಾಗರಾಜ್ ಗೌಡ, ಏಳಬೆಂಚಿ ರಾಜಶೇಖರ್ ಗೌಡ, ಬ್ಯಾಲಚಿಂತೆ ರಾಮನಗೌಡ, ಜಾನೆಕುಂಟೆ ಬಸವರಾಜ ಗೌಡ, ಘನ ಮಲ್ಲನಗೌಡ, ಸಿರಿಗೇರಿ ಪನ್ನರಾಜ್ ಯಾಳ್ಪಿ ದಿವಾಕರ್ ಗೌಡ ಸೇರಿದಂತೆ ಇನ್ನೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಓದಿ