ಹಗರಿಬೊಮ್ಮನಹಳ್ಳಿ

ಜೆಸ್ಕಾಂನ ನಿವೃತ್ತ ಅಂಜಿನಪ್ಪಗೆ ಸನ್ಮಾನ

ಜೆಸ್ಕಾಂನ ನಿವೃತ್ತ ಅಂಜಿನಪ್ಪಗೆ ಸನ್ಮಾನ

ಹಗರಿಬೊಮ್ಮನಹಳ್ಳಿ 13: ಇತ್ತೀಚೆಗೆ ಜೆಸ್ಕಾಂ ಇಲಾಖೆಯಲ್ಲಿ ನಿವೃತ್ತಿ ಹೊಂದಿದ ಅಂಜಿನಪ್ಪ. ಡಿ  ಅವರಿಗೆ ತಾಲೂಕು ವಾಲ್ಮೀಕಿ ನೌಕರರ ಸಂಘದಿಂದ ಸನ್ಮಾನಿಸಲಾಯಿತು.  

ವಾಲ್ಮೀಕಿ ನೌಕರ ಸಂಘದ ನಿಕಟಪೂರ್ವ ಅಧ್ಯಕ್ಷರು ಟಿ ಸೋಮಶೇಖರ್  ಮಾತನಾಡಿದ  ಅಂಜಿನಪ್ಪ ಅವರು ತಾಲೂಕು ವಾಲ್ಮೀಕಿ ನೌಕರರ ಸಂಘದಲ್ಲಿ ನಾಲ್ಕು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಮ್ಮ ಸಮಾಜದ ಯಾವುದೇ ಕೆಲಸ ಇದ್ದರು ಸದಾ ಹಸನ್ಮುಖಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೇವೆಯನ್ನು ಮಾಡುತ್ತಿದ್ದರು. ಕೋವಿಡ್ ಒತ್ತಡಗಳ ಮಧ್ಯ ಸುಖಾಂತವಾದ ನಿವೃತ್ತಿ ಹೊಂದಿರುವುದು ಸೌಭಾಗ್ಯವೇ ಸರಿ, ತಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು, ನುಂದಿನ ದಿನಗಳಲ್ಲಿ ಸಮಾಜದ ಕಾರ್ಯಕ್ರಮಗಳಲ್ಲಿ  ಮಾರ್ಗದರ್ಶಕರಾಗಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಲೆಂದು ಆಶಿಸುವೆ ಎಂದರು. 

ವಾಲ್ಮೀಕಿ ನೌಕರ ಸಂಘದ ಮಾಜಿ ಅಧ್ಯಕ್ಷ ಕೆ. ಮಲ್ಲಿಕಾರ್ಜುನ  ಪ್ರೌಢಶಾಲೆ ಶಿಕ್ಷಕರಾದ ಸುರೇಶ್ ಮಂಜುನಾಥ ಟಿ ಸಕಲೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರಾದ ಪರಶುರಾಮ.ಬಿ.ಪ್ರಾಕಾಶ್ ಮೋಹನ ಅಣಜಿ. ಯು ರಾಮಕೃಷ್ಣ. ಮಾಳಿಗಿ ಸ್ವಾಮಿ. ರಾಜಪ್ಪ ಕತ್ತೆರ ಕೊಟ್ರೇಶ್ . ನಿವೃತ್ತ ಶಿಕ್ಷಕರಾದ ರಾಮಣ್ಣ. ಹನುಮಂತಪ್ಪ ಚಂದ್ರಾಮಪ್ಪ, ವಿ. ಮಲ್ಲಪ್ಪ ಇದ್ದರು. 


ಸುದ್ದಿ ಓದಿ