ಎಸ್ಎಸ್ಎಲ್ಸಿ:ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಮುಂಡಗೋಡ:ತಾಲೂಕಿನ ಚಳಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಸ್.ಆರ್.ಡಿ.ಟ್ರಸ್ಟ್ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳಿಗೆ ಶನಿವಾರ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ವಿಠ್ಠು ಗಾವಡೆ, ಐಶ್ವರ್ಯ ಜೈನ್, ಬೀರು ಗಾವಡೆ, ಪ್ರಶಾಂತ ಥೋರವತ್, ಬಾಬು ಥೋರವತ್, ವಿಠ್ಠಲ ಥೋರವತ್, ರಾಘವೇಂದ್ರ ಜೋರೆ, ಜನ್ನು ಮಿಸಳ, ಬೀರು ಗಾವಡೆ, ಬಮ್ಮು ಥೋರವತ್ ಇವರನ್ನು ಸನ್ಮಾನಿಸಲಾಯಿತು.
ನಾಗನೂರ ಗ್ರಾಮ ಪಂಚಾಯತ ಅಧ್ಯಕ್ಷ ಸುನೀಲ ಶೆಳಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಮ್ಸಿ ಅಧ್ಯಕ್ಷ್ಯೆ ಇಂದಿರಾ ಪಟಕಾರೆ, ಮುಖ್ಯ ಶಿಕ್ಷಕ ಅಶೋಕ ಕಾವಳ್ಳಿ, ದೇವೇಂದ್ರ ಜೈನ್, ಎಸ್.ಆರ್.ಡಿ.ಟ್ರಸ್ಟ್ನ ಬಮ್ಮು ಥೋರವತ್, ಲಕ್ಷ್ಮಣ ಗಾವಡೆ ಮತ್ತು ಊರ ಹಿರಿಯರು ಉಪಸ್ಥಿತರಿದ್ದರು. ಶಿಕ್ಷಕ ಪ್ರದೀಪ ಶೇಟ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಶೈಲಜಾ ಭಟ್ ವಂದಿಸಿದರು.