ಶಿಗ್ಗಾವ್

ಕರ್ನಾಟಕ ರಾಜ್ಯ ಕಾರ್ಮಿಕ ವಿಕಾಸ ವೇದಿಕೆ ವತಿಯಿಂದ ಮುನ್ನಾ ಬಿಸ್ತಿಗೆ ಸನ್ಮಾನ

ಕರ್ನಾಟಕ ರಾಜ್ಯ ಕಾರ್ಮಿಕ ವಿಕಾಸ ವೇದಿಕೆ ವತಿಯಿಂದ ಮುನ್ನಾ ಬಿಸ್ತಿಗೆ ಸನ್ಮಾನ

ಶಿಗ್ಗಾವಿ 02:  ನಗರ ಆಶ್ರಯ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಮುನ್ನಾ ಬಿಸ್ತಿ ಅವರಿಗೆ ಕರ್ನಾಟಕ ರಾಜ್ಯ ಕಾರ್ಮಿಕ ವಿಕಾಸ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

 ಗೌರವಿಸಿ ನಂತರ ವೇದಿಕೆಯ ರಾಜ್ಯ ಗೌರವಾಧ್ಯಕ್ಷ ಜಿಲಾನಿ ಜಂಗ್ಲಿ ಮಾತನಾಡಿ ಮುನ್ನಾ ಬಿಸ್ತಿ ಯವರಿಗೆ ನಾಮ ನಿರ್ದೇಶನ ಮಾಡಿದ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿ  ಸರ್ಕಾರ ನೀಡಿರುವ ಈ ಜವಾಬ್ದಾರಿಯನ್ನು ಜಾತಿ ಮತ ಭೇದವಿಲ್ಲದೆ ಪ್ರಾಮಾಣಿಕವಾಗಿ ನಿರ್ವಹಿಸಿ ಆಶ್ರಯ ವಂಚಿತ ಜನತೆಗೆ ನ್ಯಾಯ ಒದಗಿಸಲು ಶ್ರಮಿಸಬೇಕು ಎಂದು ಹೇಳಿದರು . 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ವಿಕಾಸ ವೇದಿಕೆ ತಾಲೂಕ ಅದ್ಯಕ್ಷ ಇಮಾಮ ಹುಸೇನ ಆದಂಭಾಯಿ, ಅಮ್ಜದಖಾನಖಾಜೇಖಾನ, ರಿಯಾಜ ಅಹ್ಮದ ಖಾಜೇಖಾನ, ಮುಖ್ತ್ಯಾರ ಅಹ್ಮದ್ ಸುಲ್ತಾನಖಾನನವರ, ಮುನ್ನಾ ಮಿಶ್ರಿಕೋಟಿ,ನಿಜಾಮ ಶಾಬಾಳ, ಬಶೀರ ಅಹ್ಮದ್ ಮನಿಯಾರ, ಮುನ್ನಾ ಗುಜರಾತಿ, ಸೇರಿದಂತೆ  ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ