ಮೂಡಲಗಿ

ಸೈನಿಕರನ್ನು ಸತ್ಕರಿಸುವ ಕಾರ್ಯ ಶ್ಲಾಘನೀಯ: ಬಾಲದಂಡಿ

ಸೈನಿಕರನ್ನು ಸತ್ಕರಿಸುವ ಕಾರ್ಯ ಶ್ಲಾಘನೀಯ: ಬಾಲದಂಡಿ

ಮೂಡಲಗಿ 03: ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ದೇಶದ ಗಡಿ ಕಾಯುತ್ತಿರುವ ನಮ್ಮ ಭಾರತೀಯ ಸೈನಿಕರ ಕಾರ್ಯವನ್ನು ನಾವೆಲ್ಲರೂ ಗೌರವಿಸಬೇಕು. ಅವರ ತ್ಯಾಗ ಬಲಿದಾನಗಳಿಂದಲೇ ನಾವು ಇಲ್ಲಿ ಕ್ಷೇಮವಾಗಿದ್ದೇವೆ ಎಂದು ಮೂಡಲಗಿಯ ಸಬ್ ಇನ್ಸಪೆಕ್ಟರ್ ಹೆಚ್. ವಾಯ್. ಬಾಲದಂಡಿ  ಹೇಳಿದರು.

ಅವರು ತುಕ್ಕಾನಟ್ಟಿಯ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಸೈನಿಕರಿಗೆ ಏರ್ಪಡಿಸಿದ ಸತ್ಕಾರ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡುತ್ತಿದ್ದರು. ಸೈನಿಕರನ್ನು ಸತ್ಕರಿಸುವ ಸತ್ಕಾರ್ಯವನ್ನು ಏರ್ಪಡಿಸಿರುವದು ತುಂಬಾ ಶ್ಲಾಘನೀಯವಾದದ್ದು ಇದರಿಂದ ನಮ್ಮ ಇಂದಿನ ವಿದ್ಯಾರ್ಥಿಗಳಲ್ಲಿಯೂ ಕೂಡ ನಾಡ ನುಡಿಯ ಬಗ್ಗೆ ದೇಶಪ್ರೇಮ ಬೆಳೆಯಲು ಸಹಕಾರಿಯಾಗುತ್ತದೆ ಎಂದರು. 

ಇತ್ತೀಚೆಗೆ ನಿವೃತ್ತ ಸೈನಿಕರಾದ ಪುಂಡಲೀಕ ಉಪ್ಪಾರ ಹಾಗೂ ರಾಜು ನಾಯಿಕವಾಡಿ ಇಬ್ಬರನ್ನೂ ಹಾಗೂ ಅವರ ಕುಟುಂಬದವರನ್ನೂ  ಸ್ಥಳೀಯ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳು ಜನಪ್ರತಿನಿಧಿಗಳು ಗೌರವಿಸಿ ಸತ್ಕರಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ರಾಜು ನಾಯಿಕವಾಡಿ,  ನಾವೆಲ್ಲ ಸರಕಾರಿ ಶಾಲೆಯಲ್ಲಿಯೇ ಕಲಿತಿರುವದರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ತುಕ್ಕಾನಟ್ಟಿಯ ಸೈನಿಕರೆಲ್ಲ ಕೂಡಿಕೊಂಡು ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ  ಸ್ವಂತ ಒಂದು ಶಾಲಾ ಕೊಠಡಿಯನ್ನು ನಿರ್ಮಿಸಿಕೊಡುತ್ತೇವೆ ಎಂದರು. 

ಅಧ್ಯಕ್ಷತೆಯನ್ನು ಸರಕಾರಿ ಶಾಲೆಯ ಮುಖ್ಯ ಗುರು ಎ.ವ್ಹಿ.ಗಿರೆಣ್ಣವರ, ಸಾನಿದ್ಯವನ್ನು ಅಮೋಘಸಿದ್ದೇಶ್ವರ ಗಾಯತ್ರಿ ಪೀಠದ ಕಿರಿಯ ಶ್ರೀಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಆಗಮಿಸಿದ್ದರು. ಅತಿಥಿಗಳಾಗಿ ಗ್ರಾ,ಪಂ ಅಧ್ಯಕ್ಷ ಕುಮಾರ ಮರ್ದಿ ಗ್ರಾ.ಪಂ ಸದಸ್ಯರಾದ ಸುನಂದಾ ಭಜಂತ್ರಿ. ತಿಪ್ಪಣ್ಣ ಹುಲಕುಂಧ, ಗಂಗಾರಾಮ ಹಮ್ಮನವರ, ಸಾಬಪ್ಪಾ ಹುಲಕುಂಧ, ಮಾಜಿ ಗ್ರಾ.ಪಂ ಸದಸ್ಯರಾದ ಅಜ್ಜಪ್ಪ ಮನ್ನಿಕೇರಿ, ಶಿವಪ್ಪಾ ಮರ್ದಿ ಭರಮಪ್ಪಾ ಉಪ್ಪಾರ ಯಮನಪ್ಪಾ ಗದಾಡಿ ರೈತ ಸಂಘದ ಮಂಜುನಾಥ ಗದಾಡಿ, ಗುರುನಾಥ ಹುಕ್ಕೇರಿ. ಗೋವಿಂದ ನಾಂವಿ, ಹಾಗೂ ವೈದ್ಯರಾದ ವಸಂತ ನಾಯಿಕವಾಡಿ, ಹಾಗೂ ಎಸ್.ಎನ್ ಬಾಗೇವಾಡಿ ಸೋಮು ಹುಲಕುಂದ ಭಾಗವಹಿಸಿದ್ದರು.

ನಿವೃತ್ತ ಸೈನಿಕರಾದ ಆನಂದ ಪತ್ತಾರ, ನಾಮದೇವ ಸಂಗಾನಟ್ಟಿ, ಸಿದ್ದಪ್ಪ ನಾಯಿಕ, ಸಿದ್ದಪ್ಪ ಬಾಗೇವಾಡಿ, ರಾಮಚಂದ್ರ ನಾಯಿಕ ಹಾಗೂ ಶಾಲೆಯ ಎಲ್ಲ ಶಿಕ್ಷಕರು  ಯೋಧರ ಕುಟುಂಬದವರು ಉಪಸ್ಥಿತರಿದ್ದರು. 

ಶಿಕ್ಷಕರಾದ ಮಹಾದೇವ ಗೋಮಾಡಿ ನಿರೂಪಿಸಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕಿರಣ ಭಜಂತ್ರಿ ವಂದಿಸಿದರು.

ಸುದ್ದಿ ಓದಿ