ಸನ್ಮಾನ ಪಡೆಯುತ್ತಿರುವುದು ಸಂತೋಷದ ಕ್ಷಣ : ಹೊನ್ನೂರು
ಬಳ್ಳಾರಿ ಫೆ.20 : ನನ್ನ ಗುರುಗಳಾದ ಸಿ.ಎ.ಎಸ್.ಎನ್. ರುದ್ರಪ್ಪನವರು ನಮಗೆ ವಾನಿಜ್ಯ ವಿಷಯಗಳನ್ನು ಮನಹ ಮುಟ್ಟುವಂತೆ ಮಾಡಿದ್ದರು ಆದ್ದರಿಂದ ಅವರು ಸಂಸ್ಥೆಯಲ್ಲಿ ಅವರಿಂದ ನಾನು ಸನ್ಮಾನ ಪಡೆಯುತ್ತಿರುವುದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿದೆ ಎಂದು ಚಾರ್ಟಡ್ ಅಕೌಂಟ್ ಸಂಸ್ಥೆಯ ಅಧ್ಯಕ್ಷರಾದ ಸಿ.ಎ.ಹೊನ್ನೂರು ಸ್ವಾಮಿಯವರು ಹೇಳಿದರು.
ಅವರು ಶನಿವಾರ ಇಲ್ಲಿನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸ್ವಾಗತ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಳ್ಳಿಯಂದ ಬಂದು ಕನ್ನಡ ಮಾಧ್ಯಮದಲ್ಲಿ ಕಲಿತ್ತಿದ್ದೇವೆ. ನಾವು ಯಾವುದಕ್ಕು ಅಡ್ಡಿವುಂಟು ಮಾಡುವುದಿಲ್ಲ ಎಂದು ವಿದ್ಯಾರ್ಥಿಗ|ಳನ್ನು ಉದ್ದೇಶಿಸಿ ಮಾತನಾಡಿದರು.
ನಂತರ ಎಸ್.ಕೆ.ಯು. ಹಿರಿಯ ಪ್ರಾಧ್ಯಪಕರಾದ ಉಮಾರೆಡ್ಡಿ, ರಾಜ್ಯ ಪ್ರಶಸ್ಥಿ ವಿಜೇತ ರಂಗ ಕಲಾವಿದೆ ಸುಜಾತಮ್ಮ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ, ಪ್ರಾಚಾರ್ಯರಾದ ಜಿ.ನಾಗರಾಜ ಅವರು ವಂದಿಸಿದರು. ಈ ಸಂದರ್ಭದಲ್ಲಿ ದೀಪಕ್, ಹರ್ಷಿತಾ, ಸೈಯದ್ ಮುಜಾಮಿಲ್, ತೇಜಶ್ವನಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.