ಶಿಗ್ಗಾವ್

ನೂತನ ಸದಸ್ಯ ತಮೀದ ಖಾಜಿಗೆ ಸನ್ಮಾನ

ನೂತನ ಸದಸ್ಯ ತಮೀದ ಖಾಜಿಗೆ ಸನ್ಮಾನ

ಶಿಗ್ಗಾವಿ 09: ತಾಲೂಕು ರಾಜಕಾರಣ ಬಂಕಾಪುರ ಪುರಸಭೆ ಚುನಾವಣೆ ಫಲಿತಾಂಶ ಮುನ್ನುಡಿ ಬರೆದಿದೆ ವಿಶ್ವಾಸವಿಟ್ಟ ಚುನಾಯಿಸಿರುವ ಜನರ ಆಶೋತ್ತರಕ್ಕೆ ಸ್ಪಂದಿಸಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳು ಕೆಲಸ ಮಾಡಬೇಕು ಎಂದು ಮುಖಂಡ ಮಂಜುನಾಥ ಮಣ್ಣಣ್ಣವರ ಅಭಿಪ್ರಾಯಿಸಿದರು. 

ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ನೂತನ ಸದಸ್ಯ ತಮೀದ ಖಾಜಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಬಂಕಾಪುರ ಪುರಸಭೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಖಾಜಿ ಅವರು ಕಾಂಗ್ರೆಸ್ ಪಕ್ಷದ ಬೆನ್ನೆಲುವಾಗಿ ನಿಂತು ಪಕ್ಷ ಸಂಘಟನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ ಪ್ರತಿಫಲ ಇಂದು ಜಯ ಸಿಕ್ಕಿದೆ. ಇದನ್ನು ಉಳಿಸಿಕೊಂಡು ಜನರ ಮನಸ್ಸುನ್ನು ಅರ್ಥಮಾಡಿಕೊಂಡು ಅವರ ಸೇವೆಗೈದು  ಬರುವ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಬೇಕು ಎಂದು ಕರೆ ನೀಡಿದರು.  

ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಾಬರ ಬೊವಾಜಿ ಮಾತನಾಡಿ, ಬಂಕಾಪುರ ಪುರಸಭೆಯಲ್ಲಿ 14 ಸ್ಥಾನಗಳನ್ನು ಗೆಲ್ಲಿಸಿಕೊಟ್ಟ ಜನರ ಹೃದಯದಲ್ಲಿ ಕಾಂಗ್ರೆಸ್ ಪಕ್ಷ ಇದೆ. ನೂತನ ಸದಸ್ಯರ ಮೇಲಿಟ್ಟ ವಿಶ್ವಾಸ ಉಳಿಸಿಕೊ ಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸಲಹೆ ನೀಡಿದರು.  

ಸುಮಾರು ವರ್ಷಗಳಿಂದ ಯುವ ಕಾಂಗ್ರೆಸ್ ಅಧ್ಯಕ್ಷರಾಗ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಖಾಜಿ,ಪಕ್ಷದ ಬೆನ್ನೆಲುಬಾಗಿ ನಿಂತು ಪಕ್ಷದ ಸಂಘಟನೆಗಾಗಿ ಶ್ರಮಿಸಿದ ಫಲವಾಗಿ ಪಕ್ಷ ಜಯಗಳಿಸಿದೆ ಎಂದರು.  

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರರಾದ ಶಿಗ್ಗಾವಿ ಪುರಸಭೆ ಸದಸ್ಯ ಗೌಸ್‌ಖಾನ ಮುನಸಿ, ಮುಕ್ತಿಯಾರ ಅಹ್ಮದ್ ತಿಮ್ಮಾಪೂರ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಸಂತಾ ಬಾಗೂರು, ಮುನ್ನಾ ಲಕ್ಷ್ಮೇಶ್ವರ, ಪಿರಸಾಬ ನದಾಫ್, ಬಸವರಾಜ ನಾಶೀಪುಡಿ, ಮುಜಾಹಿದ ದಿವಾನಸಾಬನವರ, ನದಿಂ ಅರಳಿಕಟ್ಟಿ, ನಿಂಗಪ್ಪ ಕೆಂಪಾಪುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ