ಬೇಸಾಯ ಪದ್ಧತಿಗಳ ತರಬೇತಿ ಕಾರ್ಯಾಗಾರ
ಲೋಕದರ್ಶನ ವರದಿ
ಮುಂಡಗೋಡ: ಇಲ್ಲಿನ ಸಿಬಿಆರ್ಸೆಟಿ ಕಾರ್ಯಾಲಯದ ಸಭಾಭವನದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ ಮತ್ತು ತೋಟಗಾರಿಕಾ ಸಂಶೋಧನಾ ವಿಜ್ಞಾನ ಕೇಂದ್ರ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಎಸ್ಸಿಎಸ್ಪಿ ಯೋಜನೆಯಡಿ ಕಾಳು ಮೆಣಸಿನ ಸುಧಾರಿತ ಬೇಸಾಯ ಪದ್ಧತಿಗಳ ಕುರಿತು ಶನಿವಾರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಧಾರವಾಡದ ತೋ.ಸಂ.ವಿ. ಕೇಂದ್ರದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ.ಶಾಂತಪ್ಪ ತಿರಕಣ್ಣನವರ ಕಾರ್ಯಕ್ರಮ ಉದ್ಘಾಟಿಸಿದರು. ಶಿರಸಿ ತೋಟಗಾರಿಕಾ ಸಂಶೋಧನಾ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಅಬ್ದುಲ್ಕರೀಂ ಎಂ. ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ತೋಟಗಾರಿಕಾ ನಿರ್ದೇಶಕ ಅಣ್ಣಪ್ಪ ನಾಯ್ಕ, ಜಿ.ಪಂ.ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ, ಸಹಾಯಕ ಪ್ರಾಧ್ಯಾಪಕ ಸುದೀಶ ಕುಲಕರ್ಣಿ, ಸಿಬಿಡಿಆರ್ಸೆಟಿ ಗ್ರಾಮೀಣಾಭಿವೃದ್ಧಿ ಅಧಿಕಾರಿ ಮಹಾಬಲೇಶ್ವರ ನಾಯ್ಕ, ವಿಜಯ ನಾಯ್ಕ ಹಾಗೂ ಶಾಂತಕುಮಾರ್ ಕೆ. ಉಪಸ್ಥಿತರಿದ್ದರು.