ಈರುಳ್ಳಿ ಬೆಳೆಯುವ ರೈತರು ಕೊಳೆ ರೋಗ ಬಾಧೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಿ
ಬಳ್ಳಾರಿ 08: ಹೂವಿನಹಡಗಲಿ ತಾಲೂಕು ವ್ಯಾಪ್ತಿಯಲ್ಲಿ ಈರುಳ್ಳಿ ಬೆಳೆಯಲ್ಲಿ ಹವಮಾನ ವೈಪರಿತ್ಯ ಹಾಗೂ ಸತತ ಮಳೆಯಿಂದಾಗಿ ಶೀಲೀಂಧ್ರದ ಬೆಳವಣೆಗೆಯಿಂದ ಕೊಳೆ ರೋಗ ಬಾಧೆಯು ತಾಲೂಕಿನ ವಿವಿಧ ಭಾಗಗಳಲ್ಲಿ ಕಂಡು ಬರುತ್ತಿದ್ದು, ಈರುಳ್ಳಿ ಬೆಳೆಯುವ ರೈತರು ಮುಂಜಾಗ್ರತೆ ಕ್ರಮಗಳನ್ನು ಹಾಗೂ ಓಷದೋಪಚಾರವನ್ನು ಕೈಗೊಳ್ಳಬೇಕು ಎಂದು ಹೂವಿನಹಡಗಲಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಕೈಗೊಳ್ಳಬೇಕಾದ ಕ್ರಮಗಳಿವು: ಪರ್ಯಾಯ ಬೆಳೆ ಪದ್ದತಿಯನ್ನು ಅನುಸರಿಸಬೇಕು (ಪದೇ ಪದೇ ಈರುಳ್ಳಿ ಬೆಳೆಯನ್ನು ಒಂದೇ ಹೊಲದಲ್ಲಿ ಹಲವು ಬಾರಿ ಬೆಳೆಯುತ್ತಿದ್ದರೆ ಕೊಳೆ ರೋಗ ಭಾಧೆಯು ಹೆಚ್ಚಾಗಿ ಬರುತ್ತದೆ. ಹೊಲದಲ್ಲಿ ನೀರು ನಿಲ್ಲದಂತೆ ಹಾಗೂ ಹೆಚ್ಚಿನ ತೇವಾಂಶ ಇರದಂತೆ ಎಚ್ಚರವಹಿಸಬೇಕು(ಈರುಳ್ಳಿ ಗಡ್ಡೆಗಳು ಕೊಳೆ ರೋಗ ಭಾಧೆಗೆ ಬೇಗನೆ ಹಾಳಾಗುತ್ತವೆ). ಕಳೆಯನ್ನು ಬಾರದಂತೆ ನಿಯಂತ್ರಿಸಬೇಕು. ಟ್ರೈಕೋಡರ್ಮಾ 2 ಕಿ.ಗ್ರಾಂ ಪ್ರತಿ 100 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರಕ್ಕೆ ಚೆನ್ನಾಗಿ ಬೆರಸಿ ಪ್ರತಿ ಎಕರೆ ಹೊಲದಲ್ಲಿ ಎಲ್ಲಾ ಕಡೆ ಸಮ ಪ್ರಮಾಣದಲ್ಲಿ ಹಾಕಬೇಕು ಇದರಿಂದ ಶೀಲಿಂಧ್ರ ಬೆಳೆವಣೆಗೆಯನ್ನು ತಡೆಯುತ್ತದೆ.
ಈ ಮೇಲಿನ ಓಷದಿಗಳಲ್ಲಿ ಯಾವುದಾದರು ಒಂದನ್ನು ಬಳಸಬೇಕು ನಂತರ ಮತ್ತೊಮ್ಮೆ ಪುನಾರವರ್ತಿಸದೇ 8 ದಿನಗಳ ಅವಧಿಯಲ್ಲಿ 2 ಬಾರಿ ಸಿಂಪರಣೆಯನ್ನು ಕೈಗೊಂಡು ಈರುಳ್ಳಿ ಬೆಳೆಯಲ್ಲಿ ಕೊಳೆ ರೋಗ ಬಾಧೆಯನ್ನು ನಿಯಂತ್ರಿಸಬಹುದು ಎಂದು ಗುರುವಾರದಂದು ಕೊಟ್ರ್ಪ ತಂದೆ ಕಲ್ಲಪ್ಪ ಗ್ರಾಮ ಹೊಳಗುಂದಿ ರವರ ತಾಕಿನಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಹನುಮಂತನಾಯ್ಕ ಟಿ, ಹಡಗಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಲು ಡಾ, ಸಿ ಎಂ ಕಾಲಿಬಾವಿ, ಹಡಗಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಕೀಟ ಶಾಸ್ತ್ರದ ಸಹಾಯಕ ಪ್ರಾಧ್ಯಪಕರಾದ ಡಾ.ಹನುಮಂತಪ್ಪ ಶ್ರೀಹರಿ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಚಂದ್ರಕುಮಾರ ಎನ್.ಎಲ್, ಸಹಾಯಕ ತೋಟಗಾರಿಕೆ ಅಧಿಕಾರಿ ಹರೀಶ ಎಂ.ಆರ್ ಅವರು ಬೆಳೆಯನ್ನು ಪರೀಶೀಲಿಸಿ ಸೂಕ್ತ ಓಷದೋಪಚಾರದ ಕುರಿತು ರೈತರಿಗೆ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.