ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಬಾಲಾಜಿ ಕಾರ್ಖಾನೆ ನುಗ್ಗಿದ ರೈತರು
ಕಲ್ಲು,ಕಬ್ಬಿನ ಜಲ್ಲಿ ತೂರಿದ ಉದ್ರಿಕ್ತರಿಂದ ಗಾಜು ಪುಡಿ ಪುಡಿ

ಮುದ್ದೇಬಿಹಾಳ : ಕಬ್ಬಿನ ಎಫ್.ಆರ್.ಪಿ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿ ಅಖಂಡ ಕನರ್ಾಟಕ ರೈತ ಸಂಘಟನೆ ನೇತೃತ್ವದಲ್ಲಿ ಶನಿವಾರ ತಾಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ವೇಳೆ ಸಹನೆ ಕಳೆದುಕೊಂಡ ಕೆಲ ರೈತರು ಕಲ್ಲು, ಕಬ್ಬಿನ ಜಲ್ಲೆಗಳನ್ನು ಎಸೆದು ಕಾರ್ಖಾನೆಯ ಕೊಠಡಿಯೊಂದರ ಗಾಜು ಪುಡಿಗಟ್ಟಿದ ಘಟನೆ ನಡೆದಿದೆ.
ತಾಲೂಕಿನ ತಾಳಿಕೋಟಿ, ಮುದ್ದೇಬಿಹಾಳ ಹಾಗೂ ಬ.ಬಾಗೇವಾಡಿ ಭಾಗದ ನೂರಾರು ರೈತರು ಶನಿವಾರ ಕಾರ್ಖಾನೆಗೆ ಮುತ್ತಿಗೆ ಹಾಕಲು ನಿರ್ಧರಿಸಿ ಹೋರಾಟಕ್ಕೆ ಮುಂದಾಗಿದ್ದರು. ಈ ವೇಳೆ ಪೊಲೀಸ ಅಧಿಕಾರಿಗಳು ಕಾರ್ಖಾನೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸುವುದಾಗಿ ಹೇಳಿ ರೈತರನ್ನು ಒಂದೆಡೆ ಕೂರಿಸಿದ್ದರು. ಆದರೆ ಕೆಲವು ರೈತರು ಕಾರ್ಖಾನೆಯೊಳಕ್ಕೆ ನುಗ್ಗಿ ಪ್ರತಿಭಟನೆ ನಡೆಸಲು ಮುಂದಾದರು. ನೂರಾರು ಸಂಖ್ಯೆಯಲ್ಲಿದ್ದ ರೈತರನ್ನು ತಡೆಯಲು ಪೊಲೀಸರಿಂದ ಸಾಧ್ಯವಾಗಲಿಲ್ಲ. ಏಕಾಏಕಿ ಕಾರ್ಖಾನೆಯ ಸೆಕ್ಯೂರಿಟಿಗಳನ್ನು ಕೇಳದೇ ಮುಖ್ಯಬಾಗಿಲು ತೆರೆದ ರೈತರು ಚಾಲನೆಯಲ್ಲಿದ್ದ ಕಾರ್ಖಾನೆಗೆ ಒಮ್ಮೆಲೆ ನೂರಾರು ಸಂಖ್ಯೆಯಲ್ಲಿ ನುಗ್ಗಿದರು. ಅಲ್ಲದೇ ಕಬ್ಬು ನುರಿಸುವುದನ್ನು ತಡೆಯುವಂತೆ ಆಗ್ರಹಿಸಿದರು. ಇದಕ್ಕೆ ತಕ್ಷಣ ಸ್ಪಂದಿಸದೇ ಇದ್ದ ಕಾರ್ಖಾನೆ ಸಿಬ್ಬಂದಿ ಮೇಲೆ ಸಹನೆ ಕಳೆದುಕೊಂಡ ರೈತರು ಕಾಖರ್ಾನೆಯ ಕಬ್ಬು ಅರಿಯುವ ಕೇನ್ ಕ್ಯಾರಿಯರ್ನಲ್ಲಿ ನಿಂತು ಏಕಾಏಕಿ ಕಲ್ಲು, ಕಬ್ಬಿನ ಜಲ್ಲೆ ತೂರಾಟ ನಡೆಸಿ ಕೊಠಡಿಯ ಗಾಜು ಪುಡಿ ಮಾಡಿದರು.
ಈ ವೇಳೆ ಚಾಲನೆಯಲ್ಲಿದ್ದ ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯವನ್ನು ನಿಲ್ಲಿಸಲಾಯಿತು.ಕೆಲವರು ಕೈಯ್ಯಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಹಿಡಿದು ಹೆಚ್ಚಿನ ಹಾನಿ ಮಾಡಲು ಮುಂದಾದಾಗ ಪೊಲೀಸರು ಸಮಯಪ್ರಜ್ಞೆಯಿಂದ ಅದನ್ನು ತಡೆಗಟ್ಟಿದ್ದಾರೆ.ಡಿವೈಎಸ್ಪಿ ಅರುಣಕುಮಾರ ಕೋಳೂರ,ಸಿಪಿಐ ಆನಂದ ವಾಘ್ಮೋಡೆ,ಪಿಎಸೈ ಆರೀಫ ಮುಶಾಪುರಿ,ವಿನೋದ ದೊಡಮನಿ,ಎಚ್.ಬಿ.ಸುತಗುಂಡಾರ ಸೇರಿದಂತೆ ಐವತ್ತಕ್ಕೂ ಹೆಚ್ಚು ಪೊಲೀಸರು ರೈತರ ಮನವೊಲಿಸಲು ಮುಂದಾಗಿದ್ದರೂ ರೈತರು ಪೊಲೀಸರ ಮಾತಿಗೆ ಬೆಲೆ ನೀಡಲಿಲ್ಲ.ಅಲ್ಲದೇ ಕಾಖರ್ಾನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನೂರಾರು ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿಮರ್ಾಣವಾಗಿದೆ.
ರೈತ ಸಂಘದ ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ,ಜಿಲ್ಲಾ ಪ್ರಧಾನ ಕಾರ್ಯದಶರ್ಿ ಅರವಿಂದ ಕುಲಕಣರ್ಿ,ಸೋಮನಗೌಡ ಕೋಳೂರ,ಸಂಗನಗೌಡ ಪಾಟೀಲ್,ಚೆನ್ನನಗೌಡ ಪಾಟೀಲ,ಬಸನಗೌಡ ಬಿರಾದಾರ,ಸೋಮನಗೌಡ ಪಾಟೀಲ,ಮಲ್ಲಿಕಾಜರ್ುನ ಸಿದರೆಡ್ಡಿ,ರಾಜಶೇಖರ ಕರಡ್ಡಿ ಮೊದಲಾದವರು ಭಾಗಿಯಾಗಿದ್ದರು.ಕಾಖರ್ಾನೆಯ ಅಧಿಕಾರಿ ಹಣಮಂತ ಯಲ್ಲಡಗಿ,ಪ್ರಮುಖರಾದ ರಾಹುಲಗೌಡ ಪಾಟೀಲ್ ಮೊದಲಾದವರು ಇದ್ದರು.
ತಹಸೀಲ್ದಾರ್ ಭೇಟಿ : ವಿಷಯ ತಿಳಿದ ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಸಂಜೆಯವರೆಗೂ ಮಾತುಕತೆ ನಡೆಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ ಕಡಕಭಾವಿ ಅವರು, ಸರಕಾರ ನಿಗದಿಪಡಿಸಿದ ದರವನ್ನು ನೀಡುವುದಾಗಿ ಕಾರ್ಖಾನೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.ಇದನ್ನೇ ರೈತ ಮುಖಂಡರ ಗಮನಕ್ಕೆ ತರಲಾಗಿದೆ.ಆದರೆ ಅದಕ್ಕೆ ಒಪ್ಪಿಲ್ಲ.ಹೋರಾಟ ಮುಂದುವರೆಸಿದ್ದಾರೆ.ಜಿಲ್ಲಾಧಿಕಾರಿಗಳ ಗಮನಕ್ಕೆ ಈ ಎಲ್ಲ ವಿದ್ಯಮಾನವನ್ನು ತರಲಾಗಿದೆ.ನವೆಂಬರ್ ಮೊದಲ ವಾರದಲ್ಲಿ ರೈತ ಮುಖಂಡರು,ಕಬ್ಬಿನ ಕಾರ್ಖಾನೆಯ ಆಡಳಿತ ಮಂಡಳಿ ಮುಖ್ಯಸ್ಥರು,ಅಧಿಕಾರಿಗಳ ಸಭೆ ಕರೆಯುವ ಸಾಧ್ಯತೆ ಇದ್ದು ಅಲ್ಲಿ ಅಂತಿಮ ತೀಮರ್ಾನ ಹೊರಬೀಳಲಿದೆ ಎಂದು ಹೇಳಿದರು.ರೈತರು ಕಾಖರ್ಾನೆಯ ಮುಂದೆ ಟೆಂಟ್ ಹಾಕಿ ಹೋರಾಟ ಮುಂದುವರೆಸಿದ್ದಾರೆ.
ಇದಕ್ಕೂ ಮುನ್ನ ಮುದ್ದೇಬಿಹಾಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೈತ ಮುಖಂಡರಾದ ಅರವಿಂದ ಕುಲಕಣರ್ಿ, ಮಲ್ಲಕಾಜರ್ುನ ಸಿದರೆಡ್ಡಿ, ಸೋಮನಗೌಡ ಕೋಳೂರ ಮೊದಲಾದವರು, ಕಬ್ಬಿಗೆ ಹೆಚ್ಚಿನ ದರ ನೀಡುವಂತೆ ಈ ಹೋರಾಟ ಹಮ್ಮಿಕೊಂಡಿದ್ದೇವೆ. ಪ್ರತಿ ಟನ್ಗೆ 3400 ದರದಂತೆ ಬೆಲೆ ನಿಗದಿ ಮಾಡಬೇಕು. ಆದರೆ ಕಾರ್ಖಾನೆಯಿಂದ 2502 ರೂ.ಪ್ರತಿ ಟನ್ಗೆ ನೀಡುತ್ತಿದ್ದಾರೆ. ಇದು ರೈತರಿಗೆ ಅನ್ಯಾಯ ಆಗುತ್ತಿದ್ದು ಬೆಲೆಯನ್ನು ಹೆಚ್ಚಿಸುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಹೇಳಿದರು.