ರೈತರು ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು: ಕೃಷಿ ಅಧಿಕಾರಿ ಜೋಶಿ
ತಾಳಿಕೋಟಿ19: ಸರಕಾರವು ರೈತರಿಗಾಗಿ ಘೋಷಿಸುವ ಯೋಜನೆಗಳನ್ನು ಕೃಷಿ ಇಲಾಖೆ ಮುಟ್ಟಿಸುವ ಕೆಲಸ ಮಾಡುತ್ತದೆ. ಇದರ ಸಂಪೂರ್ಣ ಸದುಪಯೋಗವನ್ನು ಗ್ರಾಮೀಣ ಭಾಗದ ರೈತ ಬಾಂಧವರು ಮಾಡಿಕೊಳ್ಳಬೇಕು ಎಂದು ತಾಳಿಕೋಟಿ ಕೃಷಿ ಅಧಿಕಾರಿ ಮಹೇಶ ಜೋಶಿ ತಿಳಿಸಿದರು.
ಇತ್ತೀಚೆಗೆ ಬಿಳೇಭಾವಿ ಗ್ರಾಮದಲ್ಲಿ ನಡೆದ ಆಯೋಜಿಸಿದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಇಲಾಖೆ ಹೊರತಂದ ಫಸಲ ಭಿಮಾ ಯೋಜನೆ ಮಾಹಿತಿ ಚಿತ್ರಪಟವನ್ನು ಜಿಲ್ಲಾ ವಿಭಾಗಾಧಿಕಾರಿಗಳಿಂದ ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಅವರು ಪ್ರಸಕ್ತ ಇಲಾಖೆಯಿಂದ ರೈತರಿಗೆ ಸಜ್ಜಿ, ತೊಗರಿ, ಹಾಗೂ ಮೆಕ್ಕೆ ಜೋಳ, ವಿತರಿಸಲಾಗುತ್ತೀದೆ. ಶಿಘ್ರದಲ್ಲಿ ಹತ್ತಿಗಿಡಗಳಿಗೆ ಸಿಂಪಡಿಸುವ ಎಣ್ಣೆ ಹಾಗೂ ಎಣ್ಣೆಪಂಪಗಳನ್ನು ಪೂರೈಸಲಾಗುವುದು. ಇದರ ಸಮಗ್ರ ಮಾಹಿತಿಗಾಗಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಸಂಪಿರ್ಕಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪ ವಿಬಾಗಾಧಿಕಾರಿ ಬಲರಾಮ ಲಮಾಣಿ, ತಹಶೀಲ್ದಾರ ಶ್ರೀಧರ ಗೋಟೂರ, ತಾಪಂ ಇಓ ಬಿ ಆರ್ ಬಿರಾದಾರ, ಬಿ. ಸಾಲವಾಡಗಿ ಗ್ರಾಪಂ ಅದ್ಯಕ್ಷ ಯಮನಪ್ಪಗೌಡ ಹೊರಗಿನಮನಿ, ಪಿ.ಎಸ್.ಐ ವಿನೋದ ದೊಡಮನಿ, ಪಿಡಿಓ ನಿಂಗನಗೌಡ ದೊಡಮನಿ, ಗ್ರಾಮ ಪ್ರಮುಖ ಮುತ್ತುಗೌಡ ಮಾಳಿ, ಉಪಸ್ಥಿತರಿದ್ದರು.