ಮೂಡಲಗಿ

ರೈತರು ಹೊಲದ ಬದುಗಳಲ್ಲಿ ಗಿಡಗಳನ್ನು ನೆಡಿ: ಪಾಟೀಲ ಕರೆ

ರೈತರು ಹೊಲದ ಬದುಗಳಲ್ಲಿ ಗಿಡಗಳನ್ನು ನೆಡಿ: ಪಾಟೀಲ ಕರೆ

ಮೂಡಲಗಿ 09: ರೈತರು ತಮ್ಮ ಹೊಲದ ಬದುಗಳಲ್ಲಿ ಗಿಡಗಳನ್ನು ನೆಡವ ಮೂಲಕ ನೀರು ಹಾಗೂ ಮಣ್ಣಿನ ಸಂರಕ್ಷಣಾ ಕಾರ್ಯಗಳನ್ನು ಮಾಡಿ ಪರಿಸರವನ್ನು ರಕ್ಷಿಸಬೇಕೆಂದು ಮಾಜಿ ಸಚಿವ ಹಾಗೂ ಬರ್ಡ್ಸ ಸಂಸ್ಥೆಯ ಅಧ್ಯಕ್ಷ ಆರ್‌.ಎಮ್‌. ಪಾಟೀಲ ಕರೆ ನೀಡಿದರು. 

ಅವರು ತಾಲೂಕಿನ ತುಕ್ಕಾನಟ್ಟಿ ಬರ್ಡ್ಸ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆವರಣದಲ್ಲಿ ಗೋಕಾಕ ಸಮಾಜಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ  ಜರುಗಿದ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ವನಮೋಹೊತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಗೋಕಾಕ ವಲಯ ಅರಣ್ಯ ವಿಭಾಗದಿಂದ ನಿರ್ವಹಿಸಲಾದ ಮಣ್ಣು ಮತ್ತು ನೀರು ಸಂರಕ್ಷಣಾ ಕಾರ್ಯವನ್ನು ಶ್ಲಾಘಿಸಿದರು. 

ಗೋಕಾಕ ವಲಯ ಅರಣ್ಯ ಅಧಿಕಾರಿ ಆನಂದ ಹೆಗ್ಡೆ ಮಾತನಾಡಿ, ಪ್ಲಾಸ್ಟಿಕ್‌ನ ಸೂಕ್ತ ವಿಲೇವಾರಿಯ ಅವಶ್ಯಕತೆಯ ಬಗ್ಗೆ ತಿಳಿಸಿದ ಅವರು ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬದ ದಿನದಂದು ಒಂದೊಂದು ಗಿಡ ನೆಟ್ಟು ಒಂದು ವರ್ಷಗಳ ಕಾಲ ಆರೈಕೆ ಮಾಡಿದಲ್ಲಿ, ಪರಿಸರವು ಪುನಶ್ಚೇತನಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು. ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಡಿ.ಎ. ಮೆಹ್ತ್ರೆ ಮಾತನಾಡಿ,  ಪರಿಸರದ ರಕ್ಷಣೆಗೆ ಪೂರಕವಾದ ಜೀವನಶೈಲಿ ಬೆಳೆಸಿಕೊಳ್ಳಬೇಕು ಎಂದರು. 

ಗಂಗಾರಾಮ ಗುಡುಗುಡಿ, ಎಲ್‌. ಕೆ.ಬುದ್ಧನಗೋಳ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಎಂ.ಬಿ. ಭಾಗವಾನ, ಶಿವಪ್ರಸಾದ, ರಮೇಶ್, ಕೃಷಿ ವಿಜ್ಞಾನ ಕೇಂದ್ರ ಮತ್ತು ನವಪ್ರಭಾ ಪ್ರೌಢ ಶಾಲೆ ಶಿಕ್ಷಕರು,  ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.  

ಹೊಂಗೆ ಬೀಜದ ಬಿತ್ತನಾ ಕಾರ್ಯವನ್ನು ಅರಣ್ಯ ವಲಯ ಸಿಬ್ಬಂದಿಯವರು ಶಾಲಾಮಕ್ಕಳ ಮೂಲಕ ಮಾಡಿಸಿ ಅರಳಿ ಗಿಡ, ಹೊಂಗೆ ಮತ್ತು ಬೇವಿನ ಗಿಡಗಳನ್ನು ನೆಡೆಲಾಯಿತು.  ಕೆ.ವಿ.ಕೆ ವಿಜ್ಞಾನಿ ಆದರ್ಶ್‌ ಹೆಚ್‌. ಎಸ್ ನಿರೂಪಿಸಿದರು, ಡಾ. ಸೂರಜ ಕೌಜಲಗಿ ವಂದಿಸಿದರು. 


ಸುದ್ದಿ ಓದಿ