ಬಳ್ಳಾರಿ

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ

ಬಳ್ಳಾರಿ : ನಗರದಲ್ಲಿ ರೈತರು ನಿರ್ದಿಷ್ಟ ಬೆಲೆ ಮಿತಿ ಕೈಬಿಡಿ ರೈತರು ಬೆಳೆದ ಎಲ್ಲಾ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲು ರಾಜ್ಯ ರೈತ ಸಂಘಟನೆಯಿಂದ ಹಾಗೂ ಹಸಿರು ಸೇನೆ ಜಿಲ್ಲೆಯ ವಿವಿಧ ಗ್ರಾಮಗಳ ರೈತರು ವತಿಯಿಂದ ನ.21ರಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಒತ್ತಾಯಿಸಿದರು. 

 ಹಾಗೂ ರೈತದ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಕೇಂದ್ರ ಸರ್ಕಾರ ಪದೇ ಪದೇ ಹೇಳುತ್ತಿದೆ. ಆದರೆ ಅದನ್ನು ಕಾರ್ಯಗತಗೊಳಿಸುವಲ್ಲಿ ಸರ್ಕಾರಗಳು ವಿಫಲಗೊಳ್ಳುತ್ತಿವೆ.ಹಾಗೂ ಬೀಜ, ರಸಗೊಬ್ಬರ, ಕೀಟನಾಶಕ ಇವುಗಳ ಬೆಲೆ ದಿನೇ ದಿನೇ ಹೆಚ್ಚುತ್ತಿದ್ದು, ಪ್ರಕೃತಿ ವಿಕೋಪ, ದಲ್ಲಾಳಿಗಳ ಹಾವಳಿಯಿಂದಾಗಿ, ಭತ್ತ, ಜೋಳ, ತೊಗರಿ, ರಾಗಿ, ಮೆಕ್ಕೆಜೋಳ, ಇತರೆ ಬೆಳೆಗಳಿಗೆ ಬೆಲೆ ಕುಸಿತದಿಂದಾಗಿ ರೈತರ ಜೀವನ ಅತಂತ್ರವಾಗಿದೆ.  

ಕೇವಲ ನಾಮ್ ಕಾವಾಸ್ತೆ ಮಾತ್ರ ಖರೀದಿ ಕೇಂದ್ರ ತೆರೆಯದೇ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ರೈತ ಬೆಳೆದ ಎಲ್ಲಾ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಬೇಕು. ಈಗಾಗಲೇ ಭತ್ತ ಖರೀದಿಯನ್ನು ಒಬ್ಬ ರೈತನಿಗೆ 40 ಕ್ವಿಂಟಾಲ್ ಎಂದು ತಿಳಿಸಿದ್ದಾರೆ. ಇದರಿಂದಾಗಿ ರೈತನಿಗೆ ನ್ಯಾಯಯುತ ಬೆಲೆ ದೊರೆಯುವುದಿಲ್ಲ. ಅದಕ್ಕಾಗಿ ರೈತ ಬೆಳೆದ ಸಂಪೂರ್ಣ ಬೆಳೆಯನ್ನು ಮಿತಿ ಃಂಐಅ ನೇ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಹಾಗೂ ಈ ಪ್ರತಿಭಟನೆಯಲ್ಲಿ  ಹಮ್ ಆದ್ಮಿ ಪಕ್ಷದ ಸಿರುಗುಪ್ಪ ವಿಧಾನಸಭಾ ಆಕಾಂಕ್ಷಿ ಯಾದ ದರ​‍್ಪ ನಾಯಕ, ಮಲ್ಲಿಕಾರ್ಜುನ ರೆಡ್ಡಿ  ಚಾಗನೂರು ಸಿರಿವಾರ ನೀರಾವರಿ ಭೂ ರಕ್ಷಣಾ ಹೋರಾಟ ಸಮಿತಿ, ರಾಜ್ಯದ್ಯಕ್ಷರಾದ ಆರ್‌.ಮಾಧವರೆಡ್ಡಿ ಕರೂರು, ರೈತರು ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ