ಇಂಡಿ

ಸಮಗ್ರ ನೀರಾವರಿ ಆಗ್ರಹಿಸಿ ರೈತರು ಎತ್ತಿನಗಾಡಿಯಲ್ಲಿ ಪ್ರತಿಭಟನೆ

ಸಮಗ್ರ ನೀರಾವರಿ ಆಗ್ರಹಿಸಿ ರೈತರು ಎತ್ತಿನಗಾಡಿಯಲ್ಲಿ ಪ್ರತಿಭಟನೆ

ಇಂಡಿ 14: ಇಂಡಿ ತಾಲೂಕು ಸಮಗ್ರ ನೀರಾವರಿಗೆ ಆಗ್ರಹಿಸಿ ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ನೇತೃತ್ವದಲ್ಲಿ ನೂರಾರು ರೈತರು ಪಟ್ಟಣದ ವಿವಿಧ ವೃತ್ತಗಳಲ್ಲಿ ಎತ್ತಿನಗಾಡಿಯ ಮುಖಾಂತರ ಮಿನಿ ವಿಧಾನಸೌಧಕ್ಕೆ ಆಗಮಿಸಿ ಶಿರಸ್ತೇದಾರ ಆರ್.ಎಸ್. ರೇವಡಿಗಾರರಿಗೆÀ ಮನವಿ ಸಲ್ಲಿಸಿದರು.

ಮಂಗಳವಾರ 14ನೇ ದಿನದ ಪ್ರತಿಭಟನೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ರೈತ ಪ್ರತಿಭಟನಕಾರರು ಎತ್ತಿನ ಗಾಡಿ ಮೂಲಕ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯತ್ತಪಡಿಸಿದರು.

ರೈತರನ್ನು ಉದೇಶಿಸಿ ಬಿ.ಡಿ. ಪಾಟೀಲ ಮಾತನಾಡಿ ತಾಲೂಕಿನಲ್ಲಿ ಬಹುತೇಕ ಕಡೆಗಳಲ್ಲಿ ನೀರಾವರಿ ಇಲ್ಲ. ಕೇವಲ ಬೆರಳೆಣಿಕೆಯಷ್ಟು ಗ್ರಾಮಗಳಿಗೆ ನೀರಾವರಿ ಸೌಲಭ್ಯವಿದೆ. ಇಂಡಿ ಶಾಖಾ ಕಾಲುವೆಯ ಟೇಲ್ ಎಂಡ್‍ವರೆಗೂ ನೀರು ಮುಟ್ಟಲ್ಲ, ಗುತ್ತಿ ಬಸವಣ್ಣ ಏತನೀರಾವರಿ ಯೋಜನೆಯ ಕಾಲುವೆ ಕಾಮಗಾರಿ ಮುಗಿದರೂ ಒಂದು ಹನಿ ನೀರು ರೈತರ ಜಮೀನಿಗೆ ಬಂದಿಲ್ಲ. ತಿಡಗುಂದಿ ಶಾಖಾ ಕಾಲುವೆ ಮೂಲಕ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಬೇಕು, ತಾಲೂಕಿನ ಎಲ್ಲ ಕೆರೆಗಳನ್ನು ತುಂಬಬೇಕು. ಒಂದು ವೇಳೆ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ನಮ್ಮ ಹೋರಾಟವನ್ನು ಉಗ್ರರೂಪದಲ್ಲಿ ಮಾಡತ್ತೇವೆ ಎಂದರು.

ರೈತರು ಪ್ರತಿಭಟನಾ ಮೆರವಣಿಗೆ ಮಧ್ಯಾನ್ನ 1 ಘಂಟೆ ಸುಮಾರಿಗೆ ರೈಲ್ವೆ ಸ್ಟೇಷÀನ ರಸ್ತೆದಿಂದ ಸಿಂದಗಿ ರಸ್ತೆ ಮಾರ್ಗವಾಗಿ ಸಾಗಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಲವು ಘಂಟೆ ಪರದಾಟ ನಡೆಸಿದರು. ಮೆರವಣಿÉಗೆ ಸಿಂದಗಿ ರಸ್ತೆಯಿಂದ ಮಿನಿ ವಿಧಾನಸೌಧ ತಲುಪುವರೆಗೂ ಬಸಗಳು ಸಾಲುಗಟ್ಟಿ ರಸ್ತೆಯಲ್ಲಿ ನಿಂತಿದ್ದವು. ತದನಂತರ ಬಸವೇಶ್ವರ ವೃತದಲ್ಲಿ ತಿರವು ಪಡೆದು ವಾಹನಗಳು ಸಂಚಾರ ಆರಂಭಿಸಿದವು.

ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮಗೊಂಡ ಮಾತನಾಡಿದರು. ಮರೆಪ್ಪ ಗಿರಣಿವಡ್ಡರ, ಸಿದ್ದು ಡಂಗಾ, ಶ್ರೀಮಂತ ಪೂಜಾರಿ, ಶರಣಗೌಡ ಪಾಟೀಲ, ಮಹಿಬೂಬ ಬೇನೂರ, ಶ್ರೀಶೈಲಗೌಡ ಪಾಟೀಲ,ಯಲಗೊಂಡ ಪೂಜಾರಿ(ಬಬಲಾದ) ಬಾಳು ರಾಠೋಡ, ಅರವಿಂದ ಪೂಜಾರಿ, ಭೀಮು ಪೂಜಾರಿ, ಸಂತೋಷ ತಳಕೇರಿ, ಶರಣಪ್ಪ ಡಂಗಿ, ರಾಜು ಚವ್ಹಾಣ, ಬಸವರಾಜ ಕವಡಿ, ಪೀರಪ್ಪ ಹೊಟಗಾರ, ಬಸವರಾಜ ಹಂಜಗಿ, ಜಯರಾಮ ರಾಠೋಡ, ಶ್ರೀಶೈಲ ಪಾಯಕರ, ಪ್ರಕಾಶ ಕೋಳಿ, ಎಚ್.ಎಮ್.ಪೂಜಾರಿ, ಅಮಸಿದ್ದ ಪೂಜಾರಿ, ನಾಗಣ್ಣ ಪೂಜಾರಿ, ಸಂಜು ಅಡವಿ, ಲವಕುಶ ಹೂಗಾರ, ನರಾಯಣ ವಾಲಿಕಾರ, ಗೋಪಾಲ ಸುರಪೂರ, ಕುಮಾರ ಸುರಗಿಹಳ್ಳಿ, ಯಲಗೊಂಡ ಪೂಜಾರಿ, ಬಸವರಾಜ ಭಾವಿಕಟ್ಟಿ, ಸೂರ್ಯಕಾಂತ ಪೂಜಾರಿ, ಚನ್ನಯ್ಯ ಹಿರೇಮಠ, ಶ್ರೀಶೈಲಗೌಡ ಬಿರಾದಾರ, ಮಲ್ಲು ಬಗಲಿ, ಪರಶುರಾಮ ಉಕ್ಕಲಿ, ರಾಜು ಮುಲ್ಲಾ, ಶಿವು ಹಿರೇಕುರಬರ, ಸೇರಿದಂತೆ ಸಾವಿರರು ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಓದಿ