ವಿಜಯಪುರ

ಕರಿಹರಿಯುವ ಹಬ್ಬಕ್ಕೆ ಸಜ್ಜಾದ ರೈತರು; ಎತ್ತುಗಳ ಅಲಂಕಾರ ಸಾಮಗ್ರಿ ಖರೀದಿ

ಕರಿಹರಿಯುವ ಹಬ್ಬಕ್ಕೆ ಸಜ್ಜಾದ ರೈತರು; ಎತ್ತುಗಳ ಅಲಂಕಾರ ಸಾಮಗ್ರಿ ಖರೀದಿ

ಲೋಕದರ್ಶನ ವರದಿ 

ತಾಂಬಾ 26 : ಗ್ರಾಮದಲ್ಲಿ ಸೋಮವಾರ ನಡೆಯುಲಿರುವ ಕಾರಹುಣ್ಣಿಮೆಯ "ಕರಿ ಹರಿಯುವ" ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಎತ್ತುಗಳಿಗೆ ಬೆಕಾದ ಅಲಂಕಾರ ಸಾಮಗ್ರಿಗಳನ್ನು ಕರಿದಿಸಿದರು. ರೈತನ ಒಡನಾಡಿ ಮಿತ್ರ ಎಂದೆಲ್ಲ ಕರೆಸಿಕೊಳ್ಳುವ ಎತ್ತುಗಳಿಗೆ ವಿಶೇಷ ಹಬ್ಬದ ದಿನ ಕಾರಹುಣ್ಣಿಮೆ. ಈ ದಿನ ರೈತರು ತಮ್ಮ ಎತ್ತುಗಳಿಗೆ ಬಗೆ ಬಗೆಯ ವಸ್ತುಗಳಿಂದ ಶೃಂಗರಿಸಿ ಊರಿನೆಲ್ಲೆಡೆ ತಿರುಗಾಡಿಸಿ ಅಭಿಮಾನ ಹಾಗೂ ದೇವರ ಸ್ವರೂಪವಾಗಿರುವ ಎತ್ತುಗಳಿಗೆ ಗೌರವ ಸಲ್ಲಿಸುವ ಸಂಪ್ರದಾಯ ಮೊದಲಿನಿಂದಲು ನಡೆದು ಬಂದಿದೆ. ಅಂತೇಯೆ ಎತ್ತುಗಳ ಶೃಂಗಾರಕ್ಕೆ ಬೇಕಾಗುವ ಹಣೆಕಟ್ಟು, ಗೆಜ್ಜೆ ಸರ, ಗುಂಗರಿ ಸರ, ಬಾರಕೋಲ್, ಜತ್ತಿಗೆ, ಗೊಂಡೆ, ಕೊಮ್ಮಣಸು, ಹಿಡಿ ಹಗ್ಗ, ರಿಬ್ಬಿನ, ಕವಡಿ ಸರ, ಹಿತ್ತಾಳೆ, ಸರಪಣಿ, ಬಾಸಿಂಗ್, ಜೂಲ್ ಸೇರಿದಂತೆ ಹತ್ತು ಹಲವು ಬಗೆಯ ಶೃಂಗಾರ ಸಾಮಗ್ರಿಗಳನ್ನು ರೈತರು ಶುಕ್ರವಾರ ಕರಿದಿಸಿದಿಸುವಲ್ಲಿ ನಿರತರಾಗಿದ್ದರು.  

ಗ್ರಾಮದ ವ್ಯಾಪಾರಿ ಸಂಗಯ್ಯ ಹಿರೇಮಠ ಪತ್ರಿಕೆಯೊಂದಿಗೆ ಮಾತಾನಾಡಿ, ಈ ಬಾರಿ ಕಾರಹುಣ್ಣಿಮೆ ಮಳೆ ಇಲ್ಲದೆ  ಮುಂಗಾರು ಹಂಗಾಮು ಆರಂಭದಲ್ಲಿಯೇ ರೈತನ ಆಸೆ ನಿರಾಶೆ ಮಾಡಿದೆ, ಮಳೆ ಇಲ್ಲದಿದ್ದರು ರೈತರು ವಲ್ಲದ ಮನಸ್ಸಿನಿಂದ ಎತ್ತುಗಳ ಶೃಂಗಾರ ಸಾಮಾನುಗಳನ್ನು ಕೊಳ್ಳುತ್ತಿದ್ದು ವ್ಯಾಪಾರ ಹೋದ ವರ್ಷ ಚೆನ್ನಾಗಿತ್ತು ಈಭಾರಿ ಮಂದಗತ್ತಿಯಲ್ಲಿದೆ ಎಂದು ತಿಳಿಸಿದರು. ರೈತ ಶ್ರೀಮಂತ ಯಳಕೋಟಿ, ಬಸಲಿಂಗಪ್ಪ ಜೇವೂರ ಮಾತನಾಡಿ ಈ ವರ್ಷ ಬರಗಾಲದಿಂದ ರೈತರು ತತ್ತರಿಸಿದ್ದಾರೆ. 

ಈ ವರ್ಷದ ರೋಣಿ, ಮಿರಗಾ, ಆರಿದ್ರಿ ಮಳೆ ಬಾರದೆಯಿರುವದರಿಂದ ರೈತರು ಉತ್ಸಾಹ ಕಳೆದುಕೊಂಡಿದ್ದಾರೆ ಆದರು ನಮ್ಮ ಎತ್ತುಗಳಿಗೆ ಸಾಮಗ್ರಿಗಳನ್ನು ಕೊಳ್ಳುತ್ತಿದ್ದೆವೆ. ಕಳೆದ ವರ್ಷಕಿಂತ ಈ ಬಾರಿ ಎತ್ತುಗಳಿಗೆ ಅಲಂಕಾರ ಮಾಡಲು ಬೇಕಾದ ಶೃಂಗಾರದ ಸಾಮಗ್ರಿಗಳ ಬೆಲೆ ದುಪಟ್ಟಾಗಿದೆ. ಯಾವುದು ಕೊಳ್ಳುವುದೊ ಎತ್ತುಗಳನ್ನು ಪೂಜಿಸಲು ಶೃಂಗಾರ ಸಾಮಗ್ರಿಗಳ ಬೆಲೆ ಹೆಚ್ಚಾದರು ಯಾವುದನ್ನು ಬಿಡುವುದೋ ಎಂದು ತಿಳಿಯುತಿಲ್ಲ. ಆದರು ಖರಿದಿಸುತ್ತಿರುವುದಾಗಿ ತಿಳಿಸಿದರು. 


ಸುದ್ದಿ ಓದಿ