ರೋಣ

ರೈತರಿಗೆ ಕೂಡಲೇ ವಿಮೆ ಮಂಜೂರು ಮಾಡಿಸಬೇಕೆಂದು ಆಗ್ರಹ

ರೈತರಿಗೆ ಕೂಡಲೇ ವಿಮೆ ಮಂಜೂರು ಮಾಡಿಸಬೇಕೆಂದು ಆಗ್ರಹ

ರೈತರಿಗೆ ಕೂಡಲೇ ವಿಮೆ ಮಂಜೂರು ಮಾಡಿಸಬೇಕೆಂದು ಆಗ್ರಹ 

ರೋಣ 14: ಹುನಗುಂಡಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ 2018, 2019 ಮತ್ತು 2020 ನೇ ಸಾಲಿನ ಬೆಳೆ ವಿಮಾ ಮೊತ್ತ ಬಿಟ್ಟು ಹೋಗಿದ್ದರ ಕುರಿತು ಬಸವಂತಪ್ಪ ಹನಮಪ್ಪ ತಳವಾರ ಹಾಗೂ ಹುನಗುಂಡಿ ಗ್ರಾಮದ ರೈತರು ಸೇರಿ  ಮನವಿ. ಸರಿಯಾದ ರೀತಿಯಲ್ಲಿ ಮಳೆ ಇಲ್ಲ,ಮಳೆ ಅಧಿಕ ಬಂದರೆ ಫಸಲಿಗೆ ರೋಗ ಇಂತಹ ಸಂದರ್ಭದಲ್ಲಿ ಮೂರು ವರ್ಷಗಳಿಂದ ಬೆಳೆ ವಿಮೆ ಬಾರದೇ ರೈತ ಕಂಗಾಲು ಇದರ ಪರಿಣಾಮವಾಗಿ ಅನ್ನದಾತ ಅಧಿಕಾರಿಗಳ ಮೊರೆ ಹೋಗಿ ತಮ್ಮ ನೋವನ್ನು ತೊಡಿಕೊಂಡಿದ್ದಾರೆ.  ಕಳೆದ ಮೂರು ವರ್ಷಗಳಿಂದ ಯಾವುದೇ ರೀತಿಯಿಂದ ರೈತರಿಗೆ ಬೆಳೆ ವಿಮೆ ಹಣವು ಬಂದಿರುವುದಿಲ್ಲ ಆದ್ದರಿಂದ ಹುನಗುಂಡಿ ಗ್ರಾಮದ ರೈತರಿಗೆ ಕೂಡಲೇ ವಿಮೆ ಮಂಜೂರು ಮಾಡಿಸಿ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.      

ತಾಲೂಕಿನ ಇತರೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಣ ಮಂಜೂರಾಗಿರುತ್ತದೆ. ಆದರೆ ಹುನಗುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಣ ಮಂಜೂರಾಗಿರುವುದಿಲ್ಲ,ಅಂದರೆ ಬಿಟ್ಟು ಹೋಗಿರುತ್ತದೆ ಪುನಃ ಪರಿಶೀಲನೆ ಮಾಡಿ ಎಲ್ಲ ರೈತರಿಗೆ ಮಂಜೂರು ಮಾಡಿಸಿಕೊಡಬೇಕು ಎಂದು ರೋಣ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಸುದ್ದಿ ಓದಿ