ಮುಂದಗೋಡ

ರೈತರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಸ್ವತಃ ತೊಡಗಿಸಿಕೊಳ್ಳಬಹುದು : ಕುಲಕರ್ಣಿ

ರೈತರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಸ್ವತಃ ತೊಡಗಿಸಿಕೊಳ್ಳಬಹುದು : ಕುಲಕರ್ಣಿ

ಲೋಕದರ್ಶನ ವರದಿ 

ಮುಂಡಗೋಡ:2022-23ನೇ ಸಾಲಿನ ತಾಲೂಕಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆರಂಭವಾಗಿದ್ದು ಕಳೆದ ಬಾರಿಯಂತೆ ಈ ಬಾರಿಯೂ ರೈತರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಸ್ವತಃ ತೊಡಗಿಸಿಕೊಳ್ಳಬಹುದು ಅಥವಾ ಮೊಬೈಲ್ ಆಪ್ ಬಳಸಲು ಬಾರದೆ ಇರುವ ರೈತರು ನಿಮ್ಮ ಗ್ರಾಮಕ್ಕೆ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್‌.ಎಸ್‌.ಕುಲಕರ್ಣಿ ಪ್ರಕಟಣೆಯಲ್ಲಿ 

ತಿಳಿಸಿದ್ದಾರೆ.  

ಸ್ವಯಂ ಸಮೀಕ್ಷೆ:ರೈತರು ಸ್ಮಾರ್ಟ್‌ ಪೋನ್ ಬಳಸಿ ಗೂಗಲ್ ಪ್ಲೇಸ್ಟೋರ್‌ನಲ್ಲಿ ರೈತರ ಬೆಳೆ ಸಮೀಕ್ಷೆ 2022-23(ಏಚಿಡಿಜಿ ಈಚಿಡಿಟಜಡಿ ಅಡಿಠ 2022-23)ಆಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಹೊಲದ ಗಡಿರೇಖೆಯೊಳಗೆ ನಿಂತು ಆಪ್‌ನಲ್ಲಿ ಆರ್ಥಿಕ ವರ್ಷ ಮತ್ತು ಋತು ದಾಖಲಿಸಬೇಕು. ನಂತರ ಆಧಾರ ಕಾರ್ಡ್‌ನಲ್ಲಿ ಕಿಖ ಅಓಆಇ ಸ್ಕ್ಯಾನ್ ಮಾಡಿದರೆ ಬೆಳೆ ಸಮೀಕ್ಷೆ ಆಪ್ ಸ್ವತಃ ಆಧಾರನಲ್ಲಿರುವ ಮಾಹಿತಿಯನ್ನು ನಮೂದಿಸುತ್ತದೆ. ನಮೂದಿಸಿದ ಮಾಹಿತಿಯನ್ನು ಸಕ್ರಿಯಗೊಳಿಸಿದರೆ ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ(ಓಖಿಕ)ಬರುತ್ತದೆ. ಆ ಒಟಿಪಿಯನ್ನು ದಾಖಲಿಸಿ ಬೆಳೆ ವಿವರ, ಪಹಣಿ, ಮಾಲೀಕರ ವಿವರ, ಬೆಳೆಯ ಛಾಯಾಚಿತ್ರ ಹಾಗೂ ಮೊದಲಾದವುಗಳ ಮಾಹಿತಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಗ್ರಾಮ ಲೆಕ್ಕಾಧಿಕಾರಿಗಳು/ಪಿಆರ್‌/ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ. 


ರೈತರಿಗೆ ಸಲಹೆ:ತಾಲೂಕಿನ ಭತ್ತ ನಾಟಿ ಮಾಡುವ ಹಲವಾರು ರೈತರು ನಾಟಿ ಮಾಡಲು ಕೃಷಿ ಇಲಾಖೆಯಿಂದ ಪ್ರಮಾಣಿತ ಭತ್ತದ ತಳಿಗಳಾದ ಎಮ್‌.ಟಿ.ಯು-1001, ಎಮ್‌.ಟಿ.ಯು-1010 

ಬಿಪಿಟಿ-5204, ಆಯ್‌.ಆರ್‌.-64 ಮುಂತಾದವುಗಳನ್ನು ಪಡೆದುಕೊಂಡಿದ್ದು, ಕೆಲವು ರೈತರು ಕಳೆದ ವರ್ಷ ಶೇಖರಿಸಿದ ಬಿತ್ತನೆ ಬೀಜಗಳನ್ನು ನಾಟಿ ಮಾಡಲು ಸಿದ್ಧಪಡಿಸಿಕೊಂಡಿರುತ್ತಾರೆ. ತಳಿಗಳ ಸಸಿಗಳನ್ನು 20ಸೆಂ.ಮೀ. ಅಂತರದ ಸಾಲುಗಳಲ್ಲಿ ಪ್ರತಿ 10ಸೆ.ಮೀ.ಗೆ 2-3ರಂತೆ ನಾಟಿ ಮಾಡಬೇಕು. ನಾಟಿ ಮಾಡುವ ಪೂರ್ವದಲ್ಲಿ ಭತ್ತದ ಸಸಿಗಳನ್ನು ಬಾವಿಷ್ಟಿನ್(ಕಾರ್ಬನ್ ಡೈಜಿಮ್) ದ್ರಾವಣದಲ್ಲಿ 20-25 ನಿಮಿಷಗಳ ಕಾಲ ಅದ್ದಿ ನಾಟಿ ಮಾಡುವುದರಿಂದ ಬೆಂಕಿ ರೋಗವನ್ನು ಹತೋಟಿ ಮಾಡಬಹುದು. ಗೊಬ್ಬರಗಳನ್ನು ಹಾಕಿದ ಮೇಲೆ ಒಂದು ಮಡಿಯಿಂದ ಇನ್ನೊಂದು ಮಡಿಗೆ ನೀರು ಹೋಗದಂತೆ ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಜವಳು ಮಣ್ಣಿನ ಕ್ಷೇತ್ರಗಳಲ್ಲಿ ನೀರು ಬಸಿದು ಹೊಗಲು ಬಸಿಗಾಲುವೆ ತೆಗೆಯಬೇಕು ಎಂದು ಅವರು ಸಲಹೆ ನೀಡಿದ್ದಾರೆ. 


ಸುದ್ದಿ ಓದಿ