ರೈತರು, ಗೃಹ ಬಳಕದಾರರು ಸೋಲರ್ ವಿದ್ಯುತ್ ಉತ್ಪಾದನೆ ತಂತ್ರ ಅಳವಡಿಸಿ: ಶಾಸಕ ಗಣೇಶ್
ಲೋಕದರ್ಶನ ವರದಿ
ಕಂಪ್ಲಿ 20: ಪ್ರತಿಯೊಬ್ಬ ರೈತರು ತಮ್ಮ ತಮ್ಮ ಹೊಲದಲ್ಲಿ ಸೋಲರ್ ವಿದ್ಯುತ್ ಉತ್ಪಾದನೆ ತಂತ್ರ ಅಳವಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇಲ್ಲಿನ ಸತ್ಯನಾರಾಯಣಪೇಟೆಯಲ್ಲಿನ ಏಸ್ ರಿನಿವೆಬಲ್ ಎನರ್ಜಿಸ್ ನೂತನ ಸೌರ ವಿದ್ಯುತ್ ಕಚೇರಿ ಉದ್ಘಾಟಿಸಿ ಮಾತನಾಡಿ, ಕಡೆ ಭಾಗದ ರೈತರಿಗೆ ಕಾಲುವೆ ಮೂಲಕ ನೀರು ್ಲ ಭೂಮಿಗೆ ತಲುಪಿಸಲು, ಸಾಧ್ಯವಿಲ್ಲ ಅದಕಾರಣ ಹೊಲಗಳಲ್ಲಿ ಪಂಪ್‌ಸೆಟ್ ಆಧಾರಿತ ನೀರಾವರಿ ಕೊಳವೆಬಾವಿಗಾಗಿ ಸೋಲರ್ ವಿದ್ಯುತ್ ಘಟಕ ಸ್ಥಾಪಿಸಿಕೊಳ್ಳಿ ಇದಕ್ಕೆ ಸರ್ಕಾರದಿಂದ ಸಬ್ಸಿಡಿ ಇದೆ ರೈತರು, ಗೃಹ ಬಳಕೆ ಸೋಲರ್ ವಿದ್ಯುತ್ ಉಪಯೋಗಿಸಿ ಕೊಳ್ಳಬೇಕು ಎಂದರು.
ಏಸ್ ರಿನಿವೆಬಲ್ ಎನರ್ಜಿಸ್ ಮಾಲಿಕ ಬಿ.ಕೆ.ದೀಪಕ್ ಮಾತನಾಡಿ ರೈತರು, ಗೃಹ ಬಳಕೆದಾರರು ಸೋಲರ್ ವಿದ್ಯುತ್ ಉತ್ಪಾದನೆ ಉಪಯೋಗಿಸಿ ಸರ್ಕಾರದಿಂದ ಸಬ್ಸಿಡಿ ಇದೆ ಸೌರ ವಿದ್ಯುತ್ ಕಛೇರಿಗೆ ಬೇಟಿ ನೀಡಿ ಎಂದರು ಪ್ರಮುಖ ಕೆ.ಶ್ರೀನಿವಾಸರಾವ್, ಎಂ.ಸುಧೀರ್, ಬುರೆಡ್ಡಿ ಹರ್ಷವರ್ಧನ್, ಕರಿಬಸವನಗೌಡ, ಕೆ.ಷಣ್ಮುಖಪ್ಪ, ಭಟ್ಟ ಪ್ರಸಾದ್, ಬಿ.ಜಾಫರ್, ವೈ.ಅಬ್ದುಲ್ ಮುನಾಫ್ ಸೇರಿ ಇತರರಿದ್ದರು.