ಮುಂದಗೋಡ

ರೈತರ ಪಾದಯಾತ್ರೆ ಬೆಳಗಾವಿಯಿಂದ ಬೆಂಗಳೂರು ವಿಧಾನಸೌಧರವರಿಗೆ

ರೈತರ ಪಾದಯಾತ್ರೆ ಬೆಳಗಾವಿಯಿಂದ ಬೆಂಗಳೂರು ವಿಧಾನಸೌಧರವರಿಗೆ

ಮುಂಡಗೋಡ 17:  ಕರ್ನಾಟಕ ರಾಜ್ಯ ರೈತರ ಹಸಿರು ಸೇನೆ ರಾಜ್ಯ ಅಧ್ಯಕ್ಷರು ಹಾಗೂ ಸಂಸ್ಥಾಪಕರು  ಚಂದ್ರಶೇಖರ್ ಬಿ ಟಿ  ಅವರು ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಪ್ರವಾಸಿ ಮಂದಿರಕ್ಕೆ ಆಗಮಿಸಿ ಕರ್ನಾಟಕ ರಾಜ್ಯ ಪ್ರಮೋದಿಯ ಹಸಿರು ಸೇನೆ ರಾಜ್ಯಾಧ್ಯಕ್ಷರ ಸಮಕ್ಷಮದಲ್ಲಿ ಚಂದ್ರಶೇಖರ ಬಿ.ಟಿ. ಜಿಲ್ಲೆ ಮತ್ತು ತಾಲೂಕು ಪದಾಧಿಕಾರಿಗಳ ಆಯ್ಕೆಯ ಮತ್ತು ಅವರಿಗೆ ಕೊಡುತ್ತಿರುವ ರೈತರ ಕರ್ನಾಟಕ ರಾಜ್ಯ ಪ್ರಮೋದಿಯ ಹಸಿರು ಸೇನೆ ಸಂಘಟನೆ ಮಾಡುವ ಸಲುವಾಗಿ  ರೈತರ ಪಾದಯಾತ್ರೆ ಸಂಕಲ್ಪ ಹಮ್ಮಿಕೊಂಡಿದ್ದು ಬೆಳಗಾವಿಯಿಂದ ಬೆಂಗಳೂರು ವಿಧಾನಸೌಧರವರಿಗೆ  ಪಾದಯಾತ್ರೆ ಇಟ್ಟುಕೊಂಡಿದ್ದಾರೆ ವಿವಿಧ ಬೇಡಿಕೆಗಳನ್ನು ಇಟ್ಟು ಮತ್ತು ರೈತರ ಮಕ್ಕಳಿಗೆ ಉದ್ಯೋಗ ಮತ್ತು ರೈತರಿಗೆ ಶಾಶ್ವತ ನೀರಾವರಿ ಪರಿಹಾರಕ್ಕೆ  ಸಂಘದ ಸಂಘಟನೆ ಮತ್ತು ರೈತರ ಪರ ಕೆಲಸ ಮಾಡುವುದಾಗಿ ಹೇಳಿ ವಿವಿಧ ವಿಚಾರಗಳ ಬಗ್ಗೆ ಚರ್ಚೆಯನ್ನು ಮಾಡಿದರು. 

ಉತ್ತರ ಕನ್ನಡ ಜಿಲ್ಲೆ ಮತ್ತು ಮುಂಡಗೋಡ ತಾಲೂಕಿನ ವಿವಿಧ ಪದಾಧಿಕಾರಿಗಳ ಆದೇಶ ಪತ್ರವನ್ನು ನೀಡಿ ರೈತರ ಪರವಾಗಿ ನಿಲ್ಲುವುದಾಗಿ ಭರವಸೆ ನೀಡಿದರು ಮತ್ತು ರಾಜ್ಯ ಉಪಾಧ್ಯಕ್ಷರು ಮಲ್ಲೇಶ್ ಆರ್ ಲಮಾಣಿ ಮಾರುತಿ ಜಿ ಲಮಾಣಿ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಯಲ್ಲಪ್ಪ ಕೆ ಶಿವಳ್ಳಿ ಮತ್ತು ಮುಂಡಗೊಡ ತಾಲೂಕ ಅಧ್ಯಕ್ಷರು ದೊಂಡು ಕೊಕ್ಕ್ರೆ ಮತ್ತು ಉಪಾಧ್ಯಕ್ಷರು ಸುಬಾಸ್ ಕೆ ಮತ್ತು ಉತ್ತರ ಕನ್ನಡ ಜಿಲ್ಲೆಯ  ವಿವಿಧ ಪದಾಧಿಕಾರಿಗಳು ಹಾಗೂ ಮುಂಡಗೊಡ ತಾಲೂಕಿನ ಪದಾಧಿಕಾರಿಗಳು ಸಂಘದ ಸದಸ್ಯರು ಮತ್ತು ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ