ಮುಂಡರಗಿ

ಮಳೆಯಿಂದ ಹಾನಿಗೊಳಗಾದ ರೈತರ ಬೆಳೆ: ಅಪರ ಜಿಲ್ಲಾಧಿಕಾರಿ ಭೆೇಟಿ

ಮಳೆಯಿಂದ ಹಾನಿಗೊಳಗಾದ ರೈತರ ಬೆಳೆ:  ಅಪರ ಜಿಲ್ಲಾಧಿಕಾರಿ ಭೆೇಟಿ

ಮುಂಡರಗಿ 07:  ಜಿಲ್ಲೆಯಾದ್ಯಂತ ನಿರಂತರ ಸುರಿದ ಮಳೆಯಿಂದ ಹಾನಿಗೊಳಗಾದ ರೈತರ ಬೆಳೆಗಳಿಂದ ಕಂಗಾಲಾದ ರೈತರ ಜಮೀನುಗಳಿಗೆ ಗದಗ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳು ಶನಿವಾರ ಬೇಟಿ ನೀಡಿ ವಿಕ್ಷಿಸಿದರು. 

ತಾಲೂಕಿನ ಡಂಬಳ ಹೋಬಳಿ ಗ್ರಾಮಗಳಲ್ಲಿ ನಿರಂತರ ಮಳೆಯಾದ ಪರಿಣಾಮ ರೈತರ ಜಮೀನುಗಳಲ್ಲಿ ಮಳೆ ನೀರು ತುಂಬಾ ನಿಂತು ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದನ್ನು ಮನಗಂಡ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ತಾಲೂಕಿನ ಕೆಲ ಗ್ರಾಮಿಣ ಭಾಗದ ಜಮೀನುಗಳಿಗೆ ಬೇಟಿ ನೀಡಿ ಬೆಳೆ ನಷ್ಠವನ್ನು ಪರೀಶೀಲಿಸಿದರು. 

ಇವರ ಜೊತೆ ತಹಸೀಲ್ದಾರ್ ಆಶಪ್ಪ ಪೂಜಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ಸಹಾಯಕ ಕೃಷಿ ಅಧಿಕಾರಿ, ಡಂಬಳದ ಉಪ ತಹಸೀಲ್ದಾರ್ ನಾಡಕಛೇರಿ ಕಂದಾಯ ನೀರೀಕ್ಷಕರು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಜಂಟಿಯಾಗಿ ಮುಂಡರಗಿ ತಾಲೂಕಿನ ಡಂಬಳ ವಲಯದ ಪೇಠಾಲೂರ, ಹಳ್ಳಿಗುಡಿ ಮತ್ತು ವೆಂಕಟಾಪುರ ಗ್ರಾಮಗಳಿಗೆ ಭೇಟಿ ನೀಡಿ ಇತ್ತೀಚಿಗೆ ಸುರಿದ ಭಾರಿ ನಾಳೆಯಿಂದ ಹಾನಿಗೊಳಗಾದ ಹೆಸರು ಬೆಳೆಯನ್ನು ವೀಕ್ಷಣೆ ಮಾಡಿದರು. ಈ ಪರೀಶೀಲನೆ ಸಂದರ್ಭದಲ್ಲಿ ಎಲ್ಲಾ ಗ್ರಾಮಗಳ ರೈತರು ಹಾಜರಿದ್ದರು. 


ಸುದ್ದಿ ಓದಿ