ಚಿಕ್ಕೋಡಿ

ಜಿಎಲ್‍ಬಿಸಿ ಕಾಲುವೆ ಸ್ವಚ್ಚತೆಗಾಗಿ ರೈತ ಸಂಘಟನೆ ಒತ್ತಾಯ

ಜಿಎಲ್‍ಬಿಸಿ ಕಾಲುವೆ ಸ್ವಚ್ಚತೆಗಾಗಿ ರೈತ ಸಂಘಟನೆ ಒತ್ತಾಯ

ಚಿಕ್ಕೋಡಿ: ತಾಲೂಕಿನ ಕೇರೂರ ಗ್ರಾಮದ ಜಿಎಲ್‍ಬಿಸಿ ಕಾಲುವೆಯ ಸ್ವಚ್ಚತೆ ಹಾಗೂ ನೀರು ಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ  ಮನವಿ ಸಲ್ಲಿಸಿದರು.ಈ ಕಾಲುವೆಯ ಮುಖಾಂತರ ಸುಮಾರು ಹತ್ತಾರು ಹಳ್ಳಿಗಳಿಗೆ ನೀರು ಈ ಮೊದಲು ಹರಿಯುತ್ತಿದ್ದು, 10 ವμರ್Àಗಳ ಹಿಂದಿನಿಂದ ಈ ಕಾಲುವೆಗೆ ನೀರು ಸರಿಯಾದ ವೇಳೆಗೆ ಬಂದು ಮುಟ್ಟುತ್ತಿಲ್ಲಾ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಈ ಕಾಲುವೆಗೆ ನೀರು ಬರಲಾರದ್ದರಿಂದ ಅದರಲ್ಲಿ ಗಿಡ  ಕಂಟಿಗಳು ಬೆಳೆದು ಅಕ್ಕ ಪಕ್ಕದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಅದರಲ್ಲಿ ಕೆಲವು ಹಾವು.ಚೆಳು.ಮುಂತಾದ ವಿμÀಜಂತುಗಳು ತುಂಬಾ ತೊಂದರೆ ಕೊಡುತ್ತಿವೆ ಎಂದು ರೈತರು ಆಗ್ರಹಿಸಿದರು.

ಸತತವಾಗಿ  ಮುಗಳಖೊಡ  ಚೌಕಿಯಲ್ಲಿ .508. ಕ್ಯುಸೆಕ್ ಮತ್ತು ಜಿಎಲ್‍ಬಿಸಿ ಕಾಲುವೆ ಮೂಲಕ 200 ಕುಸೆಕ್ ನೀರು ಹಗಲು ರಾತ್ರಿ ಕಾಲುವೆಗೆ ನೀರು ಹರಿಸಲು ನೀರಾವರಿ ನಿಗಮದವರು ಮುಂದಾಗಬೆಕು.  ಈ ಹಿಂದೆ ರೈತ ಸಂಘ ವತಿಯಿಂದ ಸಾಕμÀ್ಟು ಬಾರಿ ನೀರು ಬಿಡಲು ಮನವಿಯನ್ನು ಸಂಬಂದಪಟ್ಟ ಎಲ್ಲಾ ಇಲಾಖೆಗಳಿಗೆ ಅರ್ಜಿಗಳನ್ನು ನೀಡಿರುತ್ತೆವೆ. ಒಂದು ವೇಳೆ ಸ್ವಚ್ಚತೆ ಹಾಗೂ ನೀರು ಹರಿಸಲು ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕೇರೂರ ಗ್ರಾಮಸ್ಥರು ಎಲ್ಲಾ ರೈತರು ಸೇರಿಕೊಂಡು ಚಿಕ್ಕೋಡಿ ಮಿರಜ ಹೆದ್ದಾರಿ ರಸ್ತೆಯನ್ನು ಬಂದ ಮಾಡಿ ನೀರು ಬಿಡುವವರೆಗೂ ಅಲ್ಲೆ ಠಿಕಾಣೆ ಹುಡುತ್ತೆವೆ ಎಂದು ರೈತ ಸಂಘದ ಚಿಕ್ಕೋಡಿ ತಾಲೂಕು ಅಧ್ಯಕ್ಷರು ಮಂಜುನಾಥ ಬಾಳು ಪರಗೌಡರು ಎಚ್ಚರಿಕೆ ನೀಡಿದರು.ಈ ವೇಳೆಯಲ್ಲಿ ಕೇರೂರ ಗ್ರಾಮ ಘಟಕದ ಅಧ್ಯಕ್ಷರು ಬಾಳಗೌಡಾ ದು ಪಾಟೀಲ . ಬಸಾಗೌಡಾ ಪಾಟೀಲ.ವೀರೇಂದ್ರ ಪಾಟೀಲ.ರಾಜು ರೆಂದಾಳೆ.ನರಸಗೌಡ ಮಾಂಗನುರೆ.ಬಸು ನಡುವಿನಮನಿ. ಶಂಕರ ಹೆಗಡೆ.ಲೊಹಿತ್ ಮಾಶಾಳೆ.ಕೆದಾರಿ ರೆಂದಾಳೆ.ಕೆದಾರಿ ಮಾಂಗನುರೆ.ಅನ್ನಪ್ಪಾ ಕುಂಬಾರ. ಇಟಪ್ಪಾ ಬಿಳಗೆ ಸೇರಿ 50 ಜನ ರೈತರು ಉಪಸ್ಥಿತರಿದ್ದರು

ಸುದ್ದಿ ಓದಿ