ರೈತ ಸಂಘದ ಪೂರ್ವಭಾವಿ ಸಭೆ
ಲೋಕದರ್ಶನ ವರದಿ
ವಿಜಯಪುರ 23: ಕರ್ನಾಟಕ ರಾಜ್ಯ ರೈತ ಸಂಘದ ವಿಜಯಪುರ ಜಿಲ್ಲಾ ಸಮಿತಿಯ ವತಿಯಿಂದ ಸಾಲ ಮನ್ನಾ ಹಾಗೂ ಕಬ್ಬಿನ ಬೆಂಬಲ ಬೆಲೆ ನಿಗದಿ ಸೇರಿದಂತೆ ರೈತರ ವಿವಿಧ ಸಮಸ್ಯೆಗಳ ಕುರಿತು ಪೂರ್ವಭಾವಿ ಸಭೆ ನಗರದ ಪ್ರವಾಸಿ ಮಂದಿರದ ಕಚೇರಿಯಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ, ಜಿಲ್ಲಾ ಕಾರ್ಯಾಧ್ಯಕ್ಷ ಮಹಾದೇವ ತೇಲಿ ಹಾಗೂ ಸಂಘಟನಾ ಕಾರ್ಯದರ್ಶಿ ಬಸವರಾಜ ಸುತ್ತಗುಂಡಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ವಿಜಯಪುರ ಹಾಗೂ ಬಸವನಬಾಗೇವಾಡಿ ತಾಲೂಕು ಸಮಿತಿಗಳನ್ನು ಪುನರ್ರಚಿಸಲಾಯಿತು. ವಿಜಯಪುರ ತಾಲೂಕು ಗೌರವಾಧ್ಯಕ್ಷರಾಗಿ ಅಮೋಘಿ ರಾ. ಉಕ್ಕಲಿ, ತಾಲೂಕಾಧ್ಯಕ್ಷರಾಗಿ ಅಜೀಜ್ ಪಟೇಲ್, ತಾಲೂಕು ಕಾರ್ಯಾಧ್ಯಕ್ಷರಾಗಿ ಅಮೃತ ತಿಪ್ಪರಿ, ಉಪಾಧ್ಯಕ್ಷರಾಗಿ ಮುದಕಪ್ಪ ಹಿರೇಕುರಬರ ಅವರನ್ನು ನೇಮಕ ಮಾಡಲಾಯಿತು.
ಯುವ ಘಟಕದ ಪ್ರ. ಕಾರ್ಯದರ್ಶಿಯಾಗಿ ಪರಶುರಾಮ ಹೇಳಕೋಟಿ, ನೂತನ ಅಂಕಲಗಿ ಗ್ರಾಮ ಘಟಕದ ಗೌರವಾಧ್ಯಕ್ಷರಾಗಿ ರೇವಣಸಿದ್ದಪ್ಪ ಸುಂಟ್ಯಾನ, ಅಧ್ಯಕ್ಷರಾಗಿ ಶ್ರೀಶೈಲ ಶಿರಕನಹಳ್ಳಿ, ಪ್ರ. ಕಾರ್ಯದರ್ಶಿಯಾಗಿ ನಬಿರಸೂಲ್ ಬಿರಾದಾರ ಹಾಗೂ ನಾಗಠಾಣ ಹೋಬಳಿ ಅಧ್ಯಕ್ಷರಾಗಿ ಓಗೆಪ್ಪ ಬಿರಾದಾರ ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಬಸವನಬಾಗೇವಾಡಿ ತಾಲೂಕು ಅಧ್ಯಕ್ಷರಾಗಿ ಮಲ್ಲು ಬೂದಿಹಾಳ, ಪ್ರಧಾನ ಕಾರ್ಯದರ್ಶಿಯಾಗಿ ಮಹಾಂತೇಶ ಕಾಗವಾಡ ಹಾಗೂ ಪಟ್ಟಣದ ಯುವ ಘಟಕದ ಅಧ್ಯಕ್ಷರಾಗಿ ಆಕಾಶ ಜಂಗಮಶೆಟ್ಟಿ ಅವರನ್ನು ನೇಮಕ ಮಾಡಲಾಯಿತು.
ದೇವರಹಿಪ್ಪರಗಿ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಸಂತೋಷ ಬಸಣ್ಣವರ ಅವರನ್ನು ಆಯ್ಕೆ ಮಾಡಲಾಯಿತು. ವಿಜಯಪುರ ಜಿಲ್ಲೆಯ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಚಿದಾನಂದ ದಾಣಿ ಅವರನ್ನು ಸರ್ವರ ಸಮ್ಮುಖದಲ್ಲಿ ನೇಮಕ ಮಾಡಿ ಆದೇಶ ಪ್ರಕಟಿಸಲಾಯಿತು. ಸಭೆಯಲ್ಲಿ ಬಸವನಬಾಗೇವಾಡಿ ತಾಲೂಕು ಗೌರವಾಧ್ಯಕ್ಷ ಸಿದ್ದಪ್ಪ ಕೋಟ್ಯಾಳ, ಸದಾಶಿವ ಬೂದಿಹಾಳ, ಅರ್ಜುನ ಹಾವಗೋಂಡ, ಮಲ್ಲು ಕೊಕಟನೂರ, ರಾಜು ಬಿರಾದಾರ, ಸೋಮಯ್ಯ ನಂದಿಕೋಲ, ಪ್ರಭುಲಿಂಗ ಕಾರಜೋಳ, ಪ್ರಭುಗೌಡ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸೆ.28ರಂದು ರೈತರ ಬೃಹತ್ ಪ್ರತಿಭಟನೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳಂತೆ ಸೆ.28ರಂದು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ರೈತರ ಸಾಲ ಮನ್ನಾ, ಬರಗಾಲ ಪರಿಹಾರ, ರೈತರಿಗೆ ಸಮರ್ಕ ವಿದ್ಯುತ್ ಪೂರೈಕೆ, ಕಬ್ಬಿನ ಬೆಲೆ ನಿಗದಿ ಸೇರಿದಂತೆ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.