ತಾಳಿಕೋಟಿ

ಐದು ಗಂಟೆಯಲ್ಲಿ 14 ಏಕರೆ ಜಮೀನು ಹರಗಿ ದಾಖಲೆ

ಐದು ಗಂಟೆಯಲ್ಲಿ 14 ಏಕರೆ ಜಮೀನು ಹರಗಿ ದಾಖಲೆ

ತಾಳಿಕೋಟಿ: ಕೇವಲ 5 ಗಂಟೆಯಲ್ಲಿ 14 ಎಕರೆ ಜಮೀನು ಹರಗುವ ಮೂಲಕ ತಾಲೂಕಿನ ಭಂಟನೂರ ಗ್ರಾಮದ ಪ್ರಗತಿಪರ ರೈತ ಸಾಹೇಬಗೌಡ ಬಸರಡ್ಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. 

ತಾಲೂಕಿನ ಭಂಟನೂರ ಗ್ರಾಮದಲ್ಲಿ ಪ್ರಗತಿಪರ ರೈತ ಸಾಹೇಬಗೌಡ ಬಸರಡ್ಡಿ ಅವರು ತಮ್ಮ ಜೋಡಿ ಎತ್ತುಗಳನ್ನು ತೆಗೆದುಕೊಂಡು ಸತತ 5 ಗಂಟೆಗಳ ಕಾಲ ಎಡಬಿಡದೆ 14 ಎಕರೆ ಜಮೀನನ್ನು ಹರಗಿದ್ದಾರೆ. 

ಇಡೀ ಗ್ರಾಮದ ಜನರು ಈ ರೈತನ ವಿಶಿಷ್ಟ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದಾ ಒಂದಿಲ್ಲಾ ಒಂದು ಸಾಧನೆಯನ್ನು ಮಾಡುವ ಈ ಪ್ರಗತಿಪರ ರೈತ ತನ್ನ ಗ್ರಾಮಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ. 


ಸುದ್ದಿ ಓದಿ