ಬಳ್ಳಾರಿ

ರೈತಾ ಮೋರ್ಚಾ ಜಿಲ್ಲಾ ವತಿಯಿಂದ ರೈತರ ದಿನಾಚರಣೆ

ರೈತಾ ಮೋರ್ಚಾ ಜಿಲ್ಲಾ ವತಿಯಿಂದ ರೈತರ ದಿನಾಚರಣೆ


ಬಳ್ಳಾರಿ 23:  ಭಾರತೀಯ ಜನತಾ ಪಾರ್ಟಿ, ರೈತಾ ಮೋರ್ಚಾ ಜಿಲ್ಲಾ ವತಿಯಿಂದ ಡಿ.23ರಂದು ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು. ಬಲರಾಮ್ ದೇವರು ಮತ್ತು ಭಾರತ ದೇಶದ 6ನೇ ಪ್ರಧಾನ ಮಂತ್ರಿಗಳಾದ ಶ್ರೀಯುತ ಚೌದರಿ ನಾರಾಯಣ ಸಿಂಗ್ ರವರ ಜನ್ಮ ದಿನೋತ್ಸವವನ್ನು ರೈತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.  

ಈ ಕಾರ್ಯಕ್ರಮ ಉದ್ಘಾಟನೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ  ಗುರುಲಿಂಗನಗೌಡ್ರು ಉದ್ಘಾಟಿಸಿ ಮತ್ತು ಸಭೆಯನ್ನು ಉದ್ದೇಶಿಸಿ ರೈತರಿಗೆ ಒಳ್ಳೆಯ ಗುಣಮಟ್ಟದ ಪರಿಕರಗಳನ್ನು ಒದಗಿಸಬೇಕೆಂದು ಇನ್ನೂ ಸರ್ಕಾರದ ಅನೇಕ ಸೌಲಭ್ಯಗಳು ಬಗ್ಗೆ ರೈತರಿಗೆ ವಿವರಿಸಿ, ನಮ್ಮ ಕರ್ನಾಟಕ ಸರ್ಕಾರವು ಇತ್ತೀಚಿಗೆ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನಗಳನ್ನು ನೀಡುತ್ತಿದ್ದು ಈ ಒಂದು ಕಾರ್ಯಕ್ರಮದ ಬಗ್ಗೆ ನಮ್ಮ ಮೆಚ್ಚಿನ ಪ್ರಧಾನ ಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ವ್ಯವಸ್ಥೆಯು ಬೇರೆ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ತಿಳಿಯಪಡಿಸಿದರು.  

ಅಧ್ಯಕ್ಷತೆಯನ್ನು ರೈತ ಮೋರ್ಚಾ ಅಧ್ಯಕ್ಷ ಗಣಪಾಲ್ ಐನಾಥರೆಡ್ಡಿ ವಹಿಸಿ, ಮಾತನಾಡುತ್ತಾ ರೈತರು ನಮ್ಮ ದೇಶದ ಬೆನ್ನೆಲುಬು ಅವರಿಗೆ ಅನೇಕ ತೊಂದರೆಗಳಿದ್ದು, ನಾವು ಪದಾಧಿಕಾರಿಗಳಾದ ನಾವುಗಳು ರೈತರಿಗೆ ಕೃಷಿಗೆ ಸಂಬಂಧಪಟ್ಟ ಬೆಳೆಗಳಿಗೆ ರಸಗೊಬ್ಬಗಳನ್ನು ಎಚ್ಚೇತವಾಗಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ, ಮುಂದಿನ ಪೀಳಿಗೆಗೆ ಬರಡು ಭೂಮಿಯನ್ನು ಕೊಡುಗೆಯಾಗಿ ನಿಡುವಂತಾಗುತ್ತದೆ. ಆದ್ದರಿಂದ ಹೆಚ್ಚಾಗಿ ಸಮಗ್ರ ಕೃಷಿ ಪದ್ಧತಿಗಳನ್ನು ನಮ್ಮ ರೈತರು ಅಳವಡಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ತಿಳಿಸಲಾಯಿತು. ಪ್ರಧಾನ ಮಂತ್ರಿ ನಿಧಿ ಸಮಾನ್ ಯೋಜನೆಯ ಮುಖಾಂತರ ನಮ್ಮ ರೈತರಿಗೆ 6000 ಮತ್ತು ಕರ್ನಾಟಕ ಸರ್ಕಾರ 4000 ನೇರವಾಗಿ ರೈತರ ಖಾತೆಗಳಿಗೆ ಜಮಾವಾಗುತ್ತಿದೆ ಮತ್ತು ನಮ್ಮ ರಾಜ್ಯ ಸರ್ಕಾರ ಇತ್ತೀಚಿಗೆ ಬೆಳೆ ಪರಿಹಾರವನ್ನು ಒಣ ಭೂಮಿಗೆ ಎಕ್ಟರ್ಗೆ 6800 ರಿಂದ 13800 ರವರೆಗೆ, ನೀರಾವರಿ ಜಮೀನಿಗೆ 13500-25000 ರವರೆಗೆ, ತೋಟಗಾರಿಕೆ ಬೆಳೆಗೆ 18000-28000ರವರೆಗೆ ಹೆಚ್ಚಿಸಿರುವುದರ ಕುರಿತು ಸಭೆಯಲ್ಲಿ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ರೈತ ಮೋರ್ಚಾ ಉಪಾಧ್ಯಕ್ಷರಾದ ಶಿವರುದ್ರಗೌಡ್ರು, ಕಾರ್ಯದರ್ಶಿಗಳಾದ ಗುರುರಾಜ್, ಶಿವಕುಮಾರ್, ನಗರ ಅಧ್ಯಕ್ಷರಾದ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ನಾಗರಾಜ, ಗ್ರಾಮಾಂತರ ಅಧ್ಯಕ್ಷರಾದ ವನ್ನಾರೆಡ್ಡಿ, ಎ.ಪಿ.ಎಂ.ಸಿ. ಸದಸ್ಯರಾದ ಅಮರೇಶ್, ಸಿರಿವಾರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಆದೇಪ್ಪ, ರೈತರಾದ ಕೂರಿಗನೂರು ಪಾಂಡುರಂಗಾರೆಡ್ಡಿ, ಹೊನ್ನೂರ​‍್ಪ ಸಿರಿವಾರ ಮುಂತಾದವರು ಉಪಸ್ಥಿತರಿದ್ದರು 


ಸುದ್ದಿ ಓದಿ