ರೈತ ದಿನಾಚರಣೆ:ಎತ್ತಿನ ಬಂಡಿಗಳ ಮೆರವಣಿಗೆ
ಮುಂಡಗೋಡ:ರೈತ ದಿನಾಚರಣೆ ಅಂಗವಾಗಿ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಶುಕ್ರವಾರ ಪಟ್ಟಣದ ಹಳೂರ ಓಣಿಯ ಶ್ರೀಮಾರಿಕಾಂಬಾ ದೇವಸ್ಥಾನದಿಂದ ನಡೆಸಿದ ಎತ್ತಿನ ಬಂಡಿಗಳ ಮೆರವಣಿಗೆಗೆ ಪಟ್ಟಣದ ಹಿರೇಮಠ ಸಂಸ್ಥಾನದ ವೇದಮೂರ್ತಿ ರುದ್ರಮುನಿ ಸ್ವಾಮಿಗಳು ಚಾಲನೆ ನೀಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು ವಾದ್ಯದ ಮೂಲಕ ಎತ್ತಿನ ಬಂಡಿಗಳ ಮೆರವಣಿಗೆ ಸಾಗಿ ನಂತರ ನ್ಯಾಸರ್ಗಿ ರಸ್ತೆಯಲ್ಲಿರುವ ಶ್ರೀಗುರು ಗೋವಿಂದ ಮತ್ತು ಶ್ರೀಸಂತ ಶಿಶುನಾಳ ಶರೀಫರ ಶಿವಯೋಗ ಮಂದಿರ ಸೇರಿತು. ನಂತರ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ಮತ್ತು ಸಾರ್ವಜನಿಕರಿಗೆ ಅನ್ನ ಸಂತರೆ್ಣ ಕಾರ್ಯಕ್ರಮ ಜರುಗಿತು.
ಈ ವೇಳೆ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ತಾಲೂಕು ಅಧ್ಯಕ್ಷ ಹನುಮಂತಪ್ಪ ಆರೆಗೊಪ್ಪ, ಯಲ್ಲಾಪುರದ ಉದ್ಯಮಿ ಶ್ರೀನಿವಾಸ ಭಟ್, ಕೃಷ್ಣ ಹಿರೇಹಳ್ಳಿ, ಪಿ.ಜಿ.ಪೊನ್ನಚ್ಚನ್, ಮಂಜುನಾಥ ಪಾಟೀಲ, ವಾದಿರಾಜ ಅಡ್ಡೆ, ಚಂದ್ರಶೇಖರ ಕರಿಗಾರ, ಅಮರೇಶ ಹರಿಜನ, ನಾಗರಾಜ ಹಂಚಿನಮನಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.