ಶಿಗ್ಗಾವ್

ಏಳನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ

ಏಳನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ


ಲೋಕದರ್ಶನ ವರದಿ 

ಶಿಗ್ಗಾವಿ 17: ತಾಲೂಕಿನ ಖುರ್ಸಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾಸರಸ್ವತಿ ಪೂಜೆ ಹಾಗೂ ಏಳನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. 

  ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷ ಬಹದ್ದೂರ್ ಪಾಟೀಲ್, ಮುಖ್ಯ ಅತಿಥಿಗಳಾಗಿ ಗಂಗಣ್ಣ ಅಣ್ಣಿಗೇರಿ, ಶಾಲೆಯ ಪ್ರಧಾನ ಗುರುಗಳಾದ ಸಿಎನ್ ಕಲಕೋಟಿ, ಶಿವಾಜಿ ದಂಡಿನ, ಬಸವರಾಜ್ ಬನ್ನಿಕೊಪ್ಪ, ಮಂಜುನಾಥ್ ಮರ್ಚಿ, ತಿಪ್ಪಣ್ಣ ಅಣ್ಣಿಗೇರಿ, ಮಾಯಕ್ಕ ಹಾಡಕರ್, ಮಂಜವ್ವ ಕಳ್ಳಿಮನಿ, ಸಂಗೀತ ಮಾಡಿಕವರ್, ರೇಣುಕಾ ವಡ್ಡರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆ ಸಕ್ಕೂಬಾಯಿ ಗೊಟಗೋಡಿ, ಮುದ್ದಮ್ಮ ವಡ್ಡರ್, ಕುಮಾರ್ ಕೆಎಂ, ಕೆಎನ್ ಕಲಾಲ್, ಜಿಎನ್ ಬಡ್ಡಿಯವರ್ ಉಪಸ್ಥಿತರಿದ್ದರು. 

ಮಹಾಸರಸ್ವತಿ ಪೂಜೆ ನಿಮಿತ್ತ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಊಟ ಹಾಗೂ ಮಕ್ಕಳಿಗೆ ಹಾಡು-ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. 


ಸುದ್ದಿ ಓದಿ