ಮುಖ್ಯ ಶಿಕ್ಷಕ ಪ್ರಕಾಶ್‌ಗೆ ಬೀಳ್ಕೊಡುಗೆ
ಹೂವಿನಹಡಗಲಿ 30: ತಾಲೂಕಿನ ಕೊಯಿಲಾರಗಟ್ಟಿ ಗ್ರಾಮದ ಸ.ಹಿ.ಪ್ರಾ.ಶಾಲೆಯ ಮುಖ್ಯಗುರುಗಳಾಗಿದ್ದ ಜಿ.ಪ್ರಕಾಶ್‌ರವರಿಗೆ ಬಡ್ತಿ ಶಿಕ್ಷಕರಾಗಿ ಮುಂಬಡ್ತಿ ಹೊಂದಿದ್ದರಿಂದ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸರ್ವಸದಸ್ಯರು ಮತ್ತು ಶಾಲಾ ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಸಂದರ್ಭದಲ್ಲಿ ಮಾತನಾಡಿದ ಜಿ.ಪ್ರಕಾಶ್‌ರವರು ಈ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಉತ್ತಮ ಕೆಲಸ ನಿರ್ವಹಿಸಲು ಸಹಕರಿಸಿದ ಗ್ರಾಮದ ಎಲ್ಲಾ ಮುಖಂಡರಿಗೆ ಹಾಗೂ ಎಸ್.ಡಿ.ಎಂ. ಅಧ್ಯಕ್ಷರು ಹಾಗೂ ಸರ್ವಸದಸ್ಯರಿಗೆ ಮತ್ತು ಸಿಬ್ಬಂದಿವರ್ಗಕ್ಕೆ ಕೃತಜ್ಷತೆಯನ್ನು ಸಲ್ಲಿಸುತ್ತೇನೆ, ಇಂದು ಮುಂಬಡ್ತಿಯಾಗಿ ಶಿವಲಿಂಗನಹಳ್ಳಿ ಶಾಲೆಗೆ ವರ್ಗಾವಣೆಯಾಗಿದ್ದರಿಂದ ಇಂದು ಸನ್ಮಾನಿಸಿ ಗೌರವಿಸಿದ್ದು ಸ್ಮರಣೀಯ ದಿನವಾಗಿದೆ ಎಂದರು.
ಶಿಕ್ಷಕಿ ಅನ್ನಪೂರ್ಣರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಎನ್.ಡಿ.ರೇಖಾ ಸ್ವಾಗತಿಸಿ, ಶಿಕ್ಷಕ ಸಿದ್ದಪ್ಪ ನಿರೂಪಿಸಿ, ಶಿಕ್ಷಕಿ ರೇಣುಕಾ ಪಾಟೀಲ್ ವಂದಿಸಿದರು. ಇದೇ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿ ಸಂತೋಷರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶರಣಪ್ಪ.ಕೆ, ಹಾಗೂ ಸರ್ವಸದಸ್ಯರು ಮತ್ತು ಗ್ರಾ.ಪಂ.ಸದಸ್ಯರಾದ ಓಲಿ ದೊಡ್ಡ ಹಾಲಪ್ಪ, ಡಿ.ಗಂಗಮ್ಮ, ಗುಜ್ಜಲ ಹನುಮಕ್ಕ, ಸುಧಾ ಬಾಬುಲಾಲ್ ಹಾಗೂ ಮುಖಂಡರಾದ ಓಲಿ ರೇವಣಸಿದ್ದಪ್ಪ, ಬಾಬುಲಾಲ್, ಸೇರಿದಂತೆ ಇತರರು ಹಾಜರಿದ್ದರು.