ಬಳ್ಳಾರಿ

ಮಹ್ಮದ್ ಹನೀಫ್ ಸಾಹೇಬ್‍ಗೆ ಬೀಳ್ಕೊಡುಗೆ

ಮಹ್ಮದ್ ಹನೀಫ್ ಸಾಹೇಬ್‍ಗೆ ಬೀಳ್ಕೊಡುಗೆ

ಬಳ್ಳಾರಿ 1: ತಾಲ್ಲೂಕಿನ ಹಿರೇಹಡ್ಲಿಗಿ ಗ್ರಾಮದ ಸ.ಹಿ.ಪ್ರಾ.ಶಾಲೆಯ ಹಿರಿಯ ಮುಖ್ಯಗುರು ಮಹ್ಮದ್ ಹನೀಫ್ ಸಾಹೇಬ್‍ರವರು ಸೇವೆಯಿಂದ ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.

ಅತಿಥಿಗಳಾಗಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ, ಸದಸ್ಯರು, ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು, ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಗಳ ಚುನಾಯಿತ ಪ್ರತಿನಿಧಿಗಳು, ಅಕ್ಕಪಕ್ಕದ ಶಾಲೆಗಳ ಶಿಕ್ಷಕರು, ವೃತ್ತಿಬಾಂಧವರು, ಸ್ನೇಹಿತರು, ಶಿಕ್ಷಣ ಪ್ರೇಮಿಗಳು, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಶಾಲಾ ಶಿಕ್ಷಕರು ಭಾಗವಹಿಸಿದ್ದರು.

ಕುರುಗೋಡು ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟೇಶರಾಮಚಂದ್ರಪ್ಪ ಮಾತನಾಡುತ್ತಾ, ಮುಖ್ಯಗುರು ಮಹ್ಮದ್ ಹನೀಫ್ ಸಾಹೇಬ್‍ರವರ ಸರಳ ಸಜ್ಜನಿಕೆ ಹಾಗೂ ಅವರ ಪರೋಪಕಾರ ಗುಣ ಮತ್ತು ವಿದ್ಯಾರ್ಥಿಗಳ ಬಗ್ಗೆ ಅವರಿಗಿರುವ ಕಾಳಜಿ, ಸರ್ವರನ್ನೂ ಗೌರವಿಸುವ ಗುಣ ಮತ್ತು ಸಮಾಧಾನ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. 

ಶಿಕ್ಷಕರಾದ ಅಕ್ಬರ್‍ಬಾಷಾ ನಿರೂಪಿಸಿದರು. ಶಿಕ್ಷಕ ಕೇಶವರೆಡ್ಡಿ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ತಿಪ್ಪೇಸ್ವಾಮಿ ವಂದಿಸಿದರು.

ಸುದ್ದಿ ಓದಿ