ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯಿಂದ ಸುಳ್ಳು ಹೇಳಿಕೆ : ಎಸ್.ಭಿಮಾನಾಯ್ಕ್
ಹಗರಿಬೊಮ್ಮನಹಳ್ಳಿ.ಅ.03 : ತಾಲೂಕಿನ ಮಾಲವಿ ಜಲಾಶಯಕ್ಕೆ ಬಿಜೆಪಿ ಪಕ್ಷದಿಂದ 1ರೂಪಾಯಿ ಸಹಿತ ಅನುದಾನ ನೀಡಿಲ್ಲ, ನೀಡಿದ್ದರೆ ದಾಖಲೆ ನೀಡಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ ಎಂದು ಶಾಸಕ ಎಸ್.ಭೀಮಾನಾಯ್ಕ್ ಹೇಳಿದರು.
ಕ್ಷೇತ್ರದ ಬಹುದಿನಗಳ ಬೇಡಿಕೆಯಾದ ಮಾಲವಿ ಜಲಾಶಯವು ಬಿಟ್ಟು ಬಿಡದೇ ಸುರಿದ ಮಳೆಯ ಹಾಗೂ ಜಲಾಶಯಕ್ಕೆ 150 ಕೋಟಿ ಅನುದಾನದಡಿ ರೂಪಿಸಿದ ಬೃಹತ್ ಯೋಜನೆಯ ಸಹಾಯದಿಂದ ಭಾನುವಾರ ಭರ್ತಿಯಾಗಿದ್ದು ಶಾಸಕ ಎಸ್.ಭೀಮಾನಾಯ್ಕ್ ಬಾಗೀನ ಆರ್ಿಸಿ ಅವರು ಮಾತನಾಡಿದರು. ಮಾಲವಿ ಜಲಾಶಯಕ್ಕೆ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಸಂತೋಷ್‌ಲಾಡ್ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ, ಬಿಜೆಪಿ ಪಕ್ಷದಿಂದ ಒಂದು ನಯ ಪೈಸೆ ನೀಡಿಲ್ಲ ಬಿಜೆಪಿ ಪಕ್ಷದ ಯಾವ ಮುಖಂಡ ಇದಕ್ಕೆ ಅನುದಾನ ನೀಡಿದ್ದೇವೆ ಎಂದು ಎನಾದರೂ ದಾಖಲೆ ನೀಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ, ಕೇವಲ ಲಿಫ್ಟ್ ಮಾಡಿದ ನೀರಿನಿಂದ ಜಲಾಶಯ ಭರ್ತಿಯಾಗಿಲ್ಲ ಇದಕ್ಕೆ ಮಳೆಯಿಂದ ಹರಿದ ಹಳ್ಳಗಳಿಂದ ನೀರು ಹರಿದಿದ್ದು ತುಂಬುವುದಕ್ಕೆ ಸಹಾಯವಾಗಿದೆ, ಕ್ಷೇತ್ರದ ರೈತರ ಆಶಿರ್ವಾದದಿಂದ ಜಲಾಶಯ ಭರ್ತಿಯಾಗಿದೆ, ಮಿನಿ ವಿಧಾನ ಸೌಧಕ್ಕೆ ಬಿಜೆಪಿ ಯಾವುದೆ ಅನುದಾನ ನೀಡಿಲ್ಲ ಮಾಲವಿ ಜಲಾಶಯದಿಂದ ಹಳ್ಳಕ್ಕೆ ಹರಿಸಿದ ನೀರಿನಲ್ಲಿ ಬಿಜೆಪಿ ಪಕ್ಷ ಕೊಚ್ಚಿ ಹೋಗಿದೆ, ಶೀಘ್ರವೇ ಕಾಲುವೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು, ಜಲಾಶಯದಲ್ಲಿ ಪಾರ್ಕ್ ನಿರ್ಮಿಸಲಾಗುವುದು, ಪ್ರವಾಸೋದ್ಯಮ ಸ್ಥಳ ಮಾಡುವ ಎಲ್ಲಾ ಅವಕಾಶಗಳನ್ನು ಸಮಪರ್ಕವಾಗಿ ಬಳಸಲಾಗುವುದು ಸಚಿವ ಆನಂದ ಸಿಂಗ್ ಅವರಿಗೆ ಪ್ರವಾಸಿಗರ ಅನುಕೂಲಕರ ವಾತಾವರಣ ಕಲ್ಪಿಸುವಂತೆ ಪತ್ರ ನೀಡಲಾಗುವುದು 3ರಿಂದ 4ಕೋಟಿ ಅನುದಾನ ನೀಡುವ ಭರವಸೆಯನ್ನು ಅವರು ನನಗೆ ನೀಡಿದ್ದಾರೆ ಎಂದರು.
ಮಾಲವಿ ಜಲಾಶಯದ ನೀರಿನಲ್ಲಿ ಸ್ನಾನ ಮಾಡಿ : ಬಿಜೆಪಿ ಪಕ್ಷ ಸುಳ್ಳು ಹೇಳಿಕೆಗಳನ್ನು ನೀಡುವುದರಲ್ಲಿ ಎತ್ತಿದ ಕೈಯಾಗಿದೆ ಕ್ಷೇತ್ರದ ಮಾಲವಿ ಜಲಾಶಯವು ನನಗೆ ಕೆಲ ದಿನಗಳ ಹಿಂದೆ ಆಶಿರ್ವಾದ ಮಾಡಿದ್ದಕ್ಕೆ ಇಂದು ಜಲಾಶಯ ಭರ್ತಿಯಾಗಿದ್ದೆ ಸಾಕ್ಷಿ ಹಾಗಾಗಿ ನಿಮ್ಮ ಪಾಪ ಪರಿಹಾರ ವಾಗಬೇಕಾದರೆ ಈ ಜಲಾಶಯದ ನೀರಿನಲ್ಲಿ ಸ್ನಾನ ಮಾಡಿ ಎಂದು ಶಾಸಕ ಭೀಮಾನಾಯ್ಕ್ ಬಿಜೆಪಿ ಪಕ್ಷದವರಿಗೆ ಖಾರವಾಗಿ ಟೀಕಿಸಿದರು.
ಈ ಸಂಧರ್ಭದಲ್ಲಿ ಶ್ರೀಕ್ಷೇತ್ರ ನಂದಿಪುರದ ಮಹೇಶ್ವರ ಸ್ವಾಮಿಗಳು, ಹಡಗಲಿ ಹಾಲವೀರ್ಪಜ್ಜ ಸ್ವಾಮಿಗಳು, ಕೊಟ್ಟೂರಿನ ಚಾನುಕೋಟಿ ಮಠದ ಸ್ವಾಮಿ, ಅಕ್ಕಿ ತೋಟೇಶ್, ಪುರಸಭೆ ಸದಸ್ಯ ಮರಿರಾಮಪ್ಪ, ಸೆರೆಗಾರ ಹುಚ್ಚಪ್ಪ, ಮಾಜಿ ಪುರಸಭೆ ಸದಸ್ಯ ಬಾಬುವಲಿ ಸೇರಿದಂತೆ ಇನ್ನಿತರರು ಇದ್ದರು.