ನಿವೃತ್ತ ಶಿಕ್ಷಕರಿಗೆ ಬೀಳ್ಕೋಡುಗೆ,ಸನ್ಮಾನ
ತಾಳಿಕೋಟಿ05: ಪಟ್ಟಣದ ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 30ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆಯನ್ನು ಸಲ್ಲಿಸಿ ಇಂದು ನಿವೃತ್ತಗೊಂಡಿರುವ ಪಿ ಯು ಕಾಲೇಜ ಉಪನ್ಯಾಸಕ ಆರ್. ಬಿ. ಜೊಂಡಿ ಹಾಗೂ ಅರೆಬಿಕ್ ಕಾಲೇಜ ಉಪನ್ಯಾಸಕ ಮೌಲಾನಾ ಅಬ್ದುಲ್ಗನಿ ಆಲೂರ, ಇವರಿಗೆ ಸಂಸ್ಥೆಯ ವತಿಯಿಂದ ಬಿಳ್ಕೋಟ್ಟು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಅಬ್ದುಲ್ರಜಾಕ ಮನಗೂಳಿ ಅವರು ನಮ್ಮ ಸಂಸ್ಥೆಯ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಈ ಇಬ್ಬರು ಶಿಕ್ಷಕರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಅವರ ಸೇವೆಯು ಅನನ್ಯವಾಗಿದೆ. ಅವರ ವಿಶ್ರಾಂತ ಬದುಕು ನೆಮ್ಮದಿಯಿಂದ ಕುಡಿದ್ದಾಗಿರಲಿ ಎಂದು ಹಾರೈಸುತ್ತೇನೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮೌಲಾನಾ ನಿಸಾರ ಅಹ್ಮದ ಅವರು ಮಾತನಾಡಿ ಶಿಕ್ಷಕವೃತ್ತಿ ಪವಿತ್ರವಾದದ್ದಾಗಿದೆ ಅವರು ಭಾರತದ ಭವ್ಯ ಭವಿಷ್ಯವನ್ನು ರೂಪಿಸುವ ವ್ಯಕ್ತಿಗಳನ್ನು ಸಿದ್ದಗೊಳಿಸುತ್ತಾರೆ. ಇಂದು ನಿವೃತ್ತರಾಗುತ್ತಿರುವ ಈ ಇಬ್ಬರು ಶಿಕ್ಷಕರು ತಮ್ಮ ಕರ್ತವ್ಯ ನಿಷ್ಟೆ ಹಾಗೂ ಪ್ರಾಮಾಣಿಕ ಸೇವೆಗೆ ಹೆಸರುವಾಸಿಯಾಗಿದ್ದಾರೆ. ಅವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ತಿಳಿಸಿದರು.
ನಿವೃತ್ತ ಉಪನ್ಯಾಸಕ ಆರ್ ಬಿ ಜೊಂಡಿ ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ಸಂಸ್ಥೆಯ ಬೆಳವಣಿಗೆಯಲ್ಲಿ ಅಲ್ಲಿರುವ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ಸಂಸ್ಥೆಯ ಆಡಳಿತ ಮಾಂಡಳಿಯ ಸದಸ್ಯರ ಪಾತ್ರವು ಆಗಿದೆ. ಇವರಿಬ್ಬರು ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ ಎಂದರು.
ಸನ್ಮಾನ: ಇದೆ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ತಾಲೂಕಿಗೆ ಉರ್ದು ಮಾದ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ತಸ್ಮೀಯಾ ನಮಾಜಕಟ್ಟಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಇುಶ್ರತ್ಜಹಾಂ ಮನಿಯಾರ ಇವರನ್ನು ಸಂಸ್ಥೆಯವತಿಯಿಂದ ಸನ್ಮಾನಿಸಲಾಯಿತು.
ಖಾಸ್ಗತೇಶ್ವರ ಮಠ ಮುಖ್ಯಸ್ಥ ಮುರುಗೇಶ ವಿರಕ್ತಮಠ, ಮುಸ್ಲೀಂ ಧರ್ಮಗುರು ಸೈಯದಶಕೀಲ ಅಹ್ಮದ ಖಾಜಿ, ಸಂಸ್ಥೆಯ ಉಪಾಧ್ಯಕ್ಷ ಬಾಬು ಬಡಗನ, ಕಾರ್ಯದರ್ಶಿ ರಾಜಅಹ್ಮದ ಒಂಟಿ, ಪಿಯು ಕಾಲೇಜ್ ಅಧ್ಯಕ್ಷ ಸಿಕಂದರ ವಠಾರ್, ಪ್ರಾಚಾರ್ಯರಾದ ಬಿ ಎಂ ಮುದಗಲ್, ಎಂ ಎಂ ಮಂದೆವಾಲ, ಮೌಲಾನಾ ಅಬ್ದುಲ್ರಹೀಮ್, ಶಿಕ್ಷಕ ಅಬ್ಬಾಸ ಡೊಲ್ಚಿ, ಎಸ್ ಎ ನಾಲಬಂದ, ಮುಜಾಹಿದ ನಮಾಜಕಟ್ಟಿ, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.