22ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ಸುಪ್ರೀಂ ಆದೇಶ ನಮ್ಮ ನೈತಿಕ ಗೆಲುವು ಎಂದ ರೈತರು
ನವದೆಹಲಿ ಡಿ 17 :ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 22 ದಿನ ತಲುಪಿದೆ. ಪ್ರತಿಭಟನಾಕಾರರ ಸಂಧಾನಕ್ಕೆ ಸಮಿತಿ ರಚಿಸುವಂತೆ ಸುಪ್ರೀಂಕೋರ್ಟ್ ಆದೇಶ ತಮಗೆ ನೈತಿಕ ಗೆಲುವಾಗಿದೆ. ಆದರೆ, ಕೇಂದ್ರ ಸರ್ಕಾರ ಮೂರು ಹೊಸ ಕಾಯ್ದೆಗಳನ್ನು ರದ್ದುಗೊಳಿಸಿದಾಗ ಮಾತ್ರ ಈ ಗೆಲುವು ರೈತರಿಗೆ ದೊರಕುತ್ತದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿ (ಎಐಸಿಎಸ್ಸಿಸಿ) ಹೇಳಿದೆ. ನ್ಯಾಯಾಲಯದ ಆದೇಶಗಳ ಕುರಿತು ಪ್ರತಿಕ್ರಿಯಿಸಿದ ಅವರು, ಮೂರು ಹೊಸ ಕೃಷಿ ಕಾನೂನು ಮತ್ತು ವಿದ್ಯುತ್ ಕಾನೂನು 2020 ಅನ್ನು ರದ್ದುಗೊಳಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.ಪ್ರಧಾನಿ ಮೋದಿ ಅವರು ರೈತರ ಭೂಮಿಯನ್ನು ಯಾರೂ ಕಿತ್ತುಕೊಳ್ಳುವುದಿಲ್ಲ, ಎಂಎಸ್ಪಿ ಮುಂದುವರಿಯಲಿದೆ ಎಂಬ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಸಮಿತಿ ರಚನೆಯ ಆದೇಶ ತಮಗೆ ನೈತಿಕ ಗೆಲುವಾಗಿದೆ. ರೈತರು ಯಾವಾಗಲೂ ತಮ್ಮ ಸಲಹೆಗಳನ್ನು ನೀಡಲು ಸಿದ್ಧರಿದ್ದಾರೆ. ಆದರೆ, ಸಮಿತಿ ರಚನೆಯಾದ ನಂತರವೂ, ಕಾಯ್ದೆಗಳನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದಿದೆ.ಗುರುವಾಗ ಗಾಜಿಪುರದಿಂದ ಬೃಹತ್ ಸಂಖ್ಯೆಯ ರೈತರು ಇಂದು ಪ್ರತಿಭಟನೆಯನ್ನು ಪಾಲ್ಗೊಳ್ಳುವ ನಿರೀಕ್ಷೆಯಿದೆ.