ಮುಂದಗೋಡ

ವಿಜೃಂಭಣೆಯ ಮಳಗಿ ಶ್ರೀಮಾರಿಕಾಂಬಾದೇವಿ ರಥೋತ್ಸವ

ವಿಜೃಂಭಣೆಯ ಮಳಗಿ ಶ್ರೀಮಾರಿಕಾಂಬಾದೇವಿ ರಥೋತ್ಸವ

ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ಶ್ರೀಮಾರಿಕಾಂಬಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ರಥೋತ್ಸವ ವಿಜೃಂಭಣೆಯಿಂದ ಜರುಗಿತು.    

ದೇವಿಯ ರಥಾರೋಹಣದ ನಂತರ ರಥೋತ್ಸವ ಮೆರವಣಿಗೆ ದೇವಸ್ಥಾನದ ಮುಂಭಾಗದಿಂದ ಹೊರಟು ಮಧ್ಯಾಹ್ನ ಚೌತಮನೆ(ಜಾತ್ರಾ ಗದ್ದುಗೆ)ಯಲ್ಲಿರುವ ಪೀಠದಲ್ಲಿ ಶ್ರೀದೇವಿಯ ಪ್ರತಿಷ್ಠಾಪನಾ ಕಾರ್ಯ ನಡೆಯಿತು. ಗ್ರಾಮದ ರಥಬೀದಿಯನ್ನು ರಂಗೋಲಿಯಿಂದ ಸಿಂಗರಿಸಲಾಗಿತ್ತು. ಮೆರವಣಿಗೆಯಲ್ಲಿ ಭಜನಾ ತಂಡ, ಡೊಳ್ಳು ಕುಣಿತ, ವಿವಿಧ ವೇಷ-ಭೂಷಣಗಳ ಗೊಂಬೆಗಳ ನೃತ್ಯ, ಹಾಗೂ ಜಾಂಜ್‌ಮೇಳಗಳು ಗಮನ ಸೆಳೆದವು. ಭಕ್ತರು ಜಯಘೋಷಗಳೊಂದಿಗೆ ತೇರು ಎಳೆದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ನಮಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ತಾಲೂಕಿನ ಹಾಗೂ ಬೇರೆ ಕಡೆಯಿಂದ ಬಂದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದರು. ದಿ.2ರಿಂದ ದಿ.7ರವರೆಗೆ ಪ್ರತಿದಿನ ಬೆಳಿಗ್ಗೆ 8ಗಂಟೆಯಿಂದ ರಾತ್ರಿ 9ಗಂಟೆವರೆಗೆ ಹಣ್ಣು-ಕಾಯಿ, ಕಾಣಿಕೆ, ಹರಕೆ, ಬೇವಿನ ಉಡಿಗೆ, ತುಲಾಭಾರ ಸೇವೆ ಸ್ವೀಕರಿಸಲಾಗುವುದು. ಪ್ರತಿದಿನ ರಾತ್ರಿ9-30ರಿಂದ ಜಾತ್ರಾ ಸ್ಥಳದ ರಂಗಸಜ್ಜಿಕೆಯಲ್ಲಿ ಮನರಂಜನಾ ಕಾರ್ಯಕ್ರಮಗಳು ಜರುಗುವವು. 


ಸುದ್ದಿ ಓದಿ