ಆದರ್ಶ ವಿದ್ಯಾಲಯದ 6ನೇ ತರಗತಿಯ ದಾಖಲಾತಿಗಾಗಿ ಅವಧಿ ವಿಸ್ತರಣೆ: ಆಂಜನೇಯ.ಕೆ.ಜಿ
ಬಳ್ಳಾರಿ.ಫೆ 23: 2020-21ನೇ ಸಾಲಿನ ಸರ್ಕಾರಿ ಆದರ್ಶ ವಿದ್ಯಾಲಯದ 6ನೇ ತರಗತಿಯ ದಾಖಲಾತಿಗಾಗಿ ಅವಧಿ ವಿಸ್ತರಣೆ ಮಾಡಲಾಗಿದ್ದು ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ವಿದ್ಯಾಲಯದ ಮುಖ್ಯ ಗುರುಗಳಾದ ಆಂಜನೇಯ.ಕೆ.ಜಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಮಾ.2ರವರೆಗೆ ಅವಕಾಶ ನೀಡಲಾಗಿದ್ದು, ತಾಲೂಕಿನ ನೋಂದಾಯಿತ ಶಾಲೆಗಳಲ್ಲಿ 5 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಆದರ್ಶ ವಿದ್ಯಾಲಯದ ಮೊ.ಸಂ.9741701618 ಗೆ ಸಂಪರ್ಕಿಸಲು ತಿಳಿಸಲಾಗಿದೆ.