ರಾಸಾಯನಿಕ ಗೊಬ್ಬರ ಅತಿ ಬಳಕೆಯಿಂದ ಭೂಮಿ ಸತ್ವ ನಾಶ- ಸಾಹಿತಿ ಜಿ.ಎಸ್.ಸತೀಶ ಆತಂಕ
ಹೂವಿನಹಡಗಲಿ 28: ಪ್ರಸ್ತುತ ಅತಿ ಹೆಚ್ಚು ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆಯಿಂದ ಭೂಮಿಯ ಫಲವತ್ತತೆ ಕಳೆದು (ಬಂಜರು) ಬರಡು ಮಾಡುತ್ತಿದೆ, ಸಾಹಿತಿ ಜಿ.ಎಸ್.ಸತೀಶ ಆತಂಕ ವ್ಯಕ್ತಪಡಿಸಿದರು.ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಹಿರೇಹಡಗಲಿ ಹೋಬಳಿ ಘಟಕ ತಾಲೂಕಿನ ಮೈಲಾರ ಗ್ರಾಮದ ತೋಟಿಗರ ದೇವೇಂದ್ರ್ಪ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಬೂದನೂರು ಚಂದ್ರೇಗೌಡ ಸ್ಮಾರಕ ದತ್ತಿ, ಪೂಜಾರ್ ಬಸವರಾಜಪ್ಪ ದೇವೇಂದ್ರ್ಪ ದತ್ತಿ, ಶ್ರೀಮತಿ ಗಡ್ಡಿ ಸಾವಿತ್ರಮ್ಮ ಗಡ್ಡಿ ಬಸಪ್ಪ ಸ್ಮರಣಾರ್ಥ ದತ್ತಿ ಹಾಗೂ ಶ್ರೀಮತಿ ಭ್ರಮರಿಬಾಯಿ ಪಾರಸ್ ಮಲ್ ಮೆಹತಾ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ’ಕೃಷಿ ವಿಜ್ಞಾನಿ’, ’ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು’ ವಿಷಯ ಕುರಿತು ಮಾತನಾಡಿದರು.
ಒಂದೇ ಬೆಳೆಯನ್ನು ಬೆಳೆಯದೆ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡರೆ ಕೃಷಿ ಲಾಭದಾಯಕವಾಗುವುದು ಎಂದರು. ಆಹಾರ ಬೆಳೆ,ವಾಣಿಜ್ಯ ಬೆಳೆ,ತೋಟಗಾರಿಕೆ ಬೆಳೆಗಳ ಜೊತೆಗೆ ಅರಣ್ಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.ಜತೆಗೆ ಹೈನುಗಾರಿಕೆ ಮೀನುಗಾರಿಕೆ ಕೋಳಿ,ಕುರಿ ಸಾಕಣೆ ಯಿಂದ ಹೆಚ್ಚು ಲಾಭಗಳಿಸಬಹುದು. ಪ್ರಾರಂಭದಲ್ಲಿ ದತ್ತಿದಾನಿ ಟಿ.ಕೆ. ಬ್ಯಾಡಗಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಕಾಶ ದೇವರಗುಡ್ಡ ಮಾತನಾಡಿ ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ, ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಲು ಕರೆ ನೀಡಿದರು. ರಿಯಾನಾಬಾನು ಸಂಗಡಿಗರು ಪ್ರಾರ್ಥಿಸಿದರು.
ಆರ್.ಆನಂದಮೂರ್ತಿ ಸ್ವಾಗತಿಸಿದರು. ಗಾಜಿ ಹೊನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಷಾ ಸಂಗಡಿಗರು ಕನ್ನಡ ಗೀತೆಗಳ ಗಾಯನ ಮಾಡಿದರು. ಕೆ.ಕಲಾವತಿ, ಎಂ.ಅನುಷಾ,ಪಿ.ಎಂ. ದಾದಾಪೀರ್ ಕವನ ವಾಚಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ವಹಿಸಿದ್ದರು. ಕೆ.ಎನ್.ವಂದಿಸಿದರು. ಶಿಕ್ಷಕಿರಾದ ಸುಧಾ ಕೆ.ವಿ. ಹಾಗೂ ದಾಕ್ಷಾಯಣಿ ಮುಳಗುಂದ ಕಾರ್ಯಕ್ರಮ ನಿರ್ವಹಿಸಿದರು.