ಅರ್ಧಕ್ಕೆ ನಿಂತಿರುವ ರೈತರ ಹೊಲಗಳಿಗೆ ಹೋಗುವ ರಸ್ತೆಗಳ ಕಾಮಗಾರಿ ಪರೀಶೀಲನೆ
ಲೋಕದರ್ಶನ ವರದಿ
ಯಮಕನಮರಡಿ 15: ಸಮೀಪದ ಹತ್ತರಗಿ ಪಶ್ಚಿಮ ಭಾಗಕ್ಕೆ ಇರುವ ರೈತರ ಹೊಲಗಳಿಗೆ ಹಾಗೂ ಸಿಂಧಿಹಾಳ ನರಸಿಂಪು ಮುಂತಾದ ಗ್ರಾಮಗಳ ರೈತರರಸ್ತೆಗಳನ್ನು ಅರ್ಧಮಟ್ಟಕ್ಕೆ ಬಿಟ್ಟಿದ್ದು ಅವುಗಳನ್ನು ಪರೀಶೀಲನೆಗಾಗಿ ಲೋಕೋಪಯೋಗಿ ಸಚಿವರಾದ ಸತೀಶ್ ಅಣ್ಣ ಜಾರಕಿಹೊಳಿ ಅವರು ಪರೀಶೀಲನೆ ಮಾಡಲು ಇಂಜಿನಿಯರ್ ಗಳನ್ನು ದಿನಾಂಕ 12ರಂದು ಕಳಿಸಿಕೊಡಲಾಗಿತ್ತು ಅವರು ಎಲ್ಲ ರಸ್ತೆಗಳನ್ನು ಖುದ್ದಾಗಿ ಪರೀಶೀಲಿಸಿ ಅವುಗಳ ಮಾಹಿತಿಗಳನ್ನು ಪಡೆದುಕೊಂಡರು ಈ ಸಂದರ್ಭದಲ್ಲಿ ಹತ್ತರಗಿ ರೈತ ಸಂಘದ ಅಧ್ಯಕ್ಷರಾದ ವಿಲಾಸ್ ತವಗ ಅವರು ಹಾಗೂ ಗ್ರಾಮದ ಮುಖಂಡರಾದ ಈರಣ್ಣ ಕೂಡಚಿ ಹಾಗೂ ರೈತ ಬಾಂಧವರು ಉಪಸ್ಥಿತರದ್ದು ತಮ್ಮ ತಮ್ಮ ತೊಂದರೆಗಳನ್ನು ಸೂಚಿಸಿದರು.
ಈ ರಸ್ತೆಗಳ ಬಗ್ಗೆ ಸಾಕಷ್ಟು ಸಲ ಈ ಭಾಗದ ಕಾಂಗ್ರೆಸ್ ಮುಖಂಡರ ಗಮನಕ್ಕೆ ಬಾರದೇ ಇರುವುದರಿಂದ ಪರೀಶೀಲನೆಗಾಗಿ ಸಚಿವರು ಖುದ್ದಾಗಿ ಇಂಜಿನಿಯರ್ ಗಳನ್ನು ಕಳಿಸಿ ಕೊಟ್ಟದ್ದು ಇರುತ್ತದೆ ಈ ಸಂದರ್ಭದಲ್ಲಿ ಸಚಿವರ ಆಪ್ತರಾದ ನಾಗರಾಜ್ ದಂದೂರ್ ಶಶಿಕಾಂತ್ ಹಟ್ಟಿ ನರ್ಸಿಂಗ್ ಪುರದ ಸುರೇಶ್ ಮೇಕಲಿ ದಾದಬಾನಟ್ಟಿ ಗ್ರಾಮದ ಸೆಟೆಪ್ಪ ಜಮಕೋಳಿ ಮಂಜುನಾಥ್ ಓಮಣ್ಣವರ್ ಹಾಗೂ ರೈತ ರಾಧ ಮಜತಿ ಕುಟುಂಬದ ಸರ್ವ ಸದಸ್ಯರು ಗೋಪಾಲ್ ಚ ಪ ನಿ ಹಾಗೂ ಸುತ್ತಮುತ್ತಲನ ರೈತರು ಉಪಸ್ಥಿತರಿದ್ದರು ಗುತ್ತಿಗೆದಾರ ವಿಶ್ವನಾಥ್ ಜಕ್ಕಪೋಳ್ ಸಿರಿದಂತೆ ಅಪಾರ ರೈತರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ನಮ್ಮ ಜಮೀನುಗಳಿಗೆ ನೀರಿನ ಅನುಕೂಲತೆ ಮಾಡಿ ಕೊಡಬೇಕೆಂದು ರೈತರು ಹೇಳಿದರು ಮನವಿ ಪತ್ರ ಕೊಟ್ಟು 24 ಗಂಟೆಗಳಲ್ಲಿ ಸಚಿವರು ರೈತರ ಸ್ಯೆಗಳ ಬಗ್ಗೆ ಪರೀಶೀಲನೆಗೆ ಮುಂದಾದದ್ದು ಇನ್ನೆರಡು ದಿನಗಳಲ್ಲಿ ಸಚಿವರು ಖುದ್ದಾಗಿ ಬಂದು ಪರೀಶೀಲಿಸಲು ಆಗುತ್ತದೆ ಎಂದು ತಿಳಿಸಿದ್ದಾರೆ.